ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪಶ್ಚಿಮ ವಿಭಾಗದ ಕಾರ್ಯದರ್ಶಿ ಸಿಬಿ ಜಾರ್ಜ್ ಅವರು, ಆಂಟಿಗುವಾ ಮತ್ತು ಬಾರ್ಬುಡಾದ ಸೇಂಟ್ ಜಾನ್ಸ್ನಲ್ಲಿ ನಡೆಯುತ್ತಿರುವ 2026ರ ಕಾಮನ್ವೆಲ್ತ್ ಸರ್ಕಾರದ ಮುಖ್ಯಸ್ಥರ ಸಭೆ (CHOGM) ಅಂಗವಾಗಿ ಆಯೋಜಿಸಲಾದ ಸಣ್ಣ ರಾಷ್ಟ್ರಗಳ ಸಚಿವರ ಸಭೆಯಲ್ಲಿ ಭಾಗವಹಿಸಿದ್ದಾರೆ.
‘ಸ್ಥಿತಿಸ್ಥಾಪಕ ಸಣ್ಣ ರಾಷ್ಟ್ರಗಳಿಗಾಗಿ ಸಹಭಾಗಿತ್ವ ಮತ್ತು ಹೂಡಿಕೆಯನ್ನು ಹೆಚ್ಚಿಸುವುದು’ ಎಂಬುದು ಈ ಸಭೆಯ ಮುಖ್ಯ ವಿಷಯವಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಸಿಬಿ ಜಾರ್ಜ್, ಸಣ್ಣ ರಾಷ್ಟ್ರಗಳು ಏಕಕಾಲದಲ್ಲಿ ಎದುರಿಸುತ್ತಿರುವ ಹಲವು ಬಿಕ್ಕಟ್ಟುಗಳು ಮತ್ತು ಪರಸ್ಪರ ಸಂಬಂಧ ಹೊಂದಿರುವ ಸವಾಲುಗಳ ಕುರಿತು ಗಮನ ಸೆಳೆದರು.
ಈ ಸವಾಲುಗಳನ್ನು ಎದುರಿಸಲು ಸಣ್ಣ ರಾಷ್ಟ್ರಗಳು ಹಾಗೂ ಸಣ್ಣ ದ್ವೀಪ ರಾಷ್ಟ್ರಗಳ ಅಭಿವೃದ್ಧಿಗೆ ಭಾರತ ತನ್ನ ಬೆಂಬಲವನ್ನು ಮುಂದುವರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು. ಪರಸ್ಪರ ಗೌರವ, ಆಯಾ ರಾಷ್ಟ್ರಗಳ ಆದ್ಯತೆಗಳು, ಸಾಮಾನ್ಯ ಆಶಯಗಳು ಮತ್ತು ಪರಸ್ಪರ ಸಾಮರ್ಥ್ಯಗಳನ್ನು ಆಧರಿಸಿದ ಸಹಭಾಗಿತ್ವದ ಮೂಲಕ ಈ ರಾಷ್ಟ್ರಗಳಿಗೆ ನೆರವು ನೀಡಲು ಭಾರತ ಬದ್ಧವಾಗಿದೆ ಎಂದು ಅವರು ತಿಳಿಸಿದರು.


