ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಭಾರತದ ಸ್ವಾಗತ: ಪ್ರದೇಶದಲ್ಲಿ ಸ್ಥಿರತೆ ಮರುಸ್ಥಾಪನೆಗೆ ಆಶಾಭಾವನೆ

1 Min Read
1 Min Read

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿದ್ದ ಸಂಘರ್ಷವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಮೂಡಿರುವ ಪರಸ್ಪರ ಒಪ್ಪಂದವನ್ನು ಭಾರತ ಸ್ವಾಗತಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಏಷ್ಯಾದ ಸಂಘರ್ಷವು ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಸ್ಥಿರತೆಗೆ ಕಾರಣವಾಗಿದ್ದು, ಹಲವು ದೇಶಗಳಲ್ಲಿ ಜೀವಹಾನಿಗೂ ಕಾರಣವಾಗಿತ್ತು ಎಂದು ಹೇಳಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಈ ತಿಳುವಳಿಕೆ ಒಪ್ಪಂದದ ಅನುಷ್ಠಾನದಿಂದ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮರುಸ್ಥಾಪನೆಯಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಜೊತೆಗೆ ಅಂತರರಾಷ್ಟ್ರೀಯ ನೌಕಾಯಾನ ಮತ್ತು ವಾಣಿಜ್ಯ ಚಟುವಟಿಕೆಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲು ಇದು ನೆರವಾಗಲಿದೆ ಎಂದು ಹೇಳಿದ್ದಾರೆ.

ಉಳಿದಿರುವ ಪ್ರಮುಖ ವಿಚಾರಗಳ ಕುರಿತು ನಡೆಯಲಿರುವ ಮಾತುಕತೆಗಳು ಶಾಶ್ವತ ಹಾಗೂ ಸಮಗ್ರ ಅಂತಿಮ ಒಪ್ಪಂದಕ್ಕೆ ದಾರಿ ಮಾಡಿಕೊಡಲಿ ಎಂಬ ನಿರೀಕ್ಷೆಯನ್ನೂ ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದಾರೆ.

ಅಮೆರಿಕ-ಇರಾನ್ ನಡುವಿನ ಈ ಒಪ್ಪಂದವನ್ನು ಜಾಗತಿಕ ಶಾಂತಿ ಹಾಗೂ ಆರ್ಥಿಕ ಸ್ಥಿರತೆಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯೆಂದು ಪರಿಗಣಿಸಲಾಗುತ್ತಿದ್ದು, ವಿವಿಧ ರಾಷ್ಟ್ರಗಳು ಇದನ್ನು ಸ್ವಾಗತಿಸಿವೆ.

Share This Article
Leave a Comment