ಅಹಮದಾಬಾದ್: ಉದ್ಘಾಟನಾ ಕಾಮನ್ವೆಲ್ತ್ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ತಾಂಜಾನಿಯಾ ವಿರುದ್ಧ 48–20 ಅಂಕಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿದ ಭಾರತ, ಟೂರ್ನಿಯಲ್ಲಿ ಸತತ ಐದನೇ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ಗೆ ಪ್ರವೇಶಿಸಿದೆ.
ಗುಂಪು ಹಂತದಲ್ಲಿ ಅಗ್ರಸ್ಥಾನ ಖಚಿತಪಡಿಸಿಕೊಂಡಿರುವ ಭಾರತಕ್ಕೆ ಇನ್ನೊಂದು ಪಂದ್ಯ ಬಾಕಿಯಿದೆ. ಶ್ರೀಲಂಕಾ ವಿರುದ್ಧದ ಈ ಪಂದ್ಯ ನಾಳೆ ನಡೆಯಲಿದ್ದು, ಸೆಮಿಫೈನಲ್ ಪಂದ್ಯ ಶುಕ್ರವಾರ ನಿಗದಿಯಾಗಿದೆ.
ಮಹಿಳೆಯರ ವಿಭಾಗದಲ್ಲೂ ತಂಡಗಳ ಭರ್ಜರಿ ಪ್ರದರ್ಶನ
ಮಹಿಳೆಯರ ವಿಭಾಗದಲ್ಲಿ ಕೀನ್ಯಾ ತಂಡ ಸ್ಕಾಟ್ಲೆಂಡ್ ವಿರುದ್ಧ 61–16 ಅಂಕಗಳ ಭರ್ಜರಿ ಜಯ ದಾಖಲಿಸಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ. ಮತ್ತೊಂದು ಪಂದ್ಯದಲ್ಲಿ ಮಲೇಷ್ಯಾ ತಂಡ ಸಿಂಗಾಪುರವನ್ನು 62–17 ಅಂಕಗಳಿಂದ ಮಣಿಸಿದೆ.
ಇನ್ನು ಬಾಂಗ್ಲಾದೇಶ ತಂಡ ಸಿಂಗಾಪುರ ವಿರುದ್ಧ 60–28 ಅಂಕಗಳ ಜಯ ಸಾಧಿಸಿದೆ. ಬಾಂಗ್ಲಾದೇಶದ ಮಿಜಾನೂರ್ ರಹಮಾನ್ 12 ಅಂಕ ಗಳಿಸಿದರೆ, ದಿಪಾಯನ್ ಗೋಲ್ಡರ್ 10 ಅಂಕಗಳ ಕೊಡುಗೆ ನೀಡಿದರು.
ಕೆನಡಾ ತಂಡ ಸ್ಕಾಟ್ಲೆಂಡ್ ವಿರುದ್ಧ 62–30 ಅಂಕಗಳಿಂದ ಗೆದ್ದು ಟೂರ್ನಿಯಲ್ಲಿ ತನ್ನ ಎರಡನೇ ಜಯ ದಾಖಲಿಸಿತು. ಕೆನಡಾದ ಅನ್ಮೋಲ್ ಠಾಕೂರ್ 19 ಅಂಕ ಗಳಿಸಿದರೆ, ಮನ್ಪ್ರೀತ್ ಸಿಂಗ್ 15 ಅಂಕಗಳನ್ನು ಸಂಪಾದಿಸಿ ತಂಡದ ಗೆಲುವಿಗೆ ನೆರವಾದರು.


