ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್‌ಗೆ ಪಿವಿ ಸಿಂಧು, ಅಶ್ಮಿತಾ ಚಲಿಹಾ ಲಗ್ಗೆ

1 Min Read
1 Min Read

ಪ್ಯಾರಿಸ್: ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಆಟಗಾರ್ತಿ ಪಿ.ವಿ. ಸಿಂಧು ಮತ್ತು ಅಶ್ಮಿತಾ ಚಲಿಹಾ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇಬ್ಬರೂ ನೇರ ಗೇಮ್‌ಗಳ ಜಯದೊಂದಿಗೆ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

ಶ್ರೇಯಾಂಕ ರಹಿತ ಆಟಗಾರ್ತಿಯಾಗಿ ಕಣಕ್ಕಿಳಿದ ಅಶ್ಮಿತಾ ಚಲಿಹಾ ದಿನದ ಅಚ್ಚರಿಯ ಫಲಿತಾಂಶ ದಾಖಲಿಸಿದರು. ಜಪಾನ್‌ನ ವಿಶ್ವದ ಎರಡನೇ ಶ್ರೇಯಾಂಕದ ಹಾಗೂ ಮೂರನೇ ಶ್ರೇಯಾಂಕಿತ ಆಟಗಾರ್ತಿ ಅಕಾನೆ ಯಮಗುಚಿ ಅವರನ್ನು 21-19, 21-18 ಅಂತರದಿಂದ ಮಣಿಸಿದರು. 37 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಅಶ್ಮಿತಾ ಉತ್ತಮ ಆಟ ಪ್ರದರ್ಶಿಸಿ ಗಮನ ಸೆಳೆದರು.

ಇನ್ನೊಂದೆಡೆ, ಪಿ.ವಿ. ಸಿಂಧು ಕೂಡ ಜಪಾನ್‌ನ ರಿಕೊ ಗುಂಜಿ ವಿರುದ್ಧ 21-12, 21-16 ಅಂತರದಲ್ಲಿ ಗೆಲುವು ಸಾಧಿಸಿದರು. 44 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪ್ರಾಬಲ್ಯ ಮೆರೆದ ಸಿಂಧು, ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸಿದರು.

ಇಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಅಶ್ಮಿತಾ ಚಲಿಹಾ ಜಪಾನ್‌ನ ನೊಜೊಮಿ ಒಕುಹಾರಾ ಅವರನ್ನು ಎದುರಿಸಲಿದ್ದಾರೆ. ಪಿ.ವಿ. ಸಿಂಧು ಚೈನೀಸ್ ತೈಪೆಯ ಚಿಯು ಪಿನ್-ಚಿಯಾನ್ ವಿರುದ್ಧ ಸೆಣಸಲಿದ್ದಾರೆ.

ಆದರೆ, ಭಾರತದ ತನ್ವಿ ಶರ್ಮಾ ಮತ್ತು ಆಯುಷ್ ಶೆಟ್ಟಿ ಪ್ರಿ-ಕ್ವಾರ್ಟರ್ ಫೈನಲ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ತನ್ವಿ ಶರ್ಮಾ ದಕ್ಷಿಣ ಕೊರಿಯಾದ ವಿಶ್ವದ ನಂಬರ್ ಒನ್ ಆಟಗಾರ್ತಿ ಆನ್ ಸೆ-ಯಂಗ್ ವಿರುದ್ಧ ಸೋಲು ಕಂಡರು. ಪುರುಷರ ಸಿಂಗಲ್ಸ್‌ನಲ್ಲಿ ಜಪಾನ್‌ನ ಕೊಡೈ ನರೋಕಾ ವಿರುದ್ಧ ಆಡುತ್ತಿದ್ದ ಆಯುಷ್ ಶೆಟ್ಟಿ ಗಾಯದ ಕಾರಣ ಪಂದ್ಯವನ್ನು ಪೂರ್ಣಗೊಳಿಸದೆ ಹಿಂದೆ ಸರಿದರು.

Share This Article