ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಿ: ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿಪಾದನೆ

1 Min Read
1 Min Read

ವಿಶ್ವಸಂಸ್ಥೆ: ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವಂತೆ ಭಾರತ ಕರೆ ನೀಡಿದೆ. ಸಂಘರ್ಷಪೀಡಿತ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಬಾಲಕಿಯರ ಸುರಕ್ಷತೆಯನ್ನು ಬಲಪಡಿಸಲು ಹಾಗೂ ವಿಶ್ವಸಂಸ್ಥೆಯ ‘ಮಹಿಳೆ, ಶಾಂತಿ ಮತ್ತು ಭದ್ರತೆ’ (Women, Peace and Security – WPS) ಕಾರ್ಯಸೂಚಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮಹಿಳೆಯರ ಪಾಲ್ಗೊಳ್ಳುವಿಕೆ ಅತ್ಯಗತ್ಯ ಎಂದು ಭಾರತ ಪ್ರತಿಪಾದಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ‘ಮಹಿಳೆ, ಶಾಂತಿ ಮತ್ತು ಭದ್ರತೆ’ ಕುರಿತ ಮುಕ್ತ ಚರ್ಚೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಪಿ. ಹರೀಶ್, ಸಂಘರ್ಷ ವಲಯಗಳ ಸುತ್ತಮುತ್ತ ವಾಸಿಸುವ ಮಹಿಳೆಯರು ಮತ್ತು ಬಾಲಕಿಯರು ಎದುರಿಸುತ್ತಿರುವ ಅಪಾಯಗಳ ಬಗ್ಗೆ ಗಮನ ಸೆಳೆದರು.

ವಿಶ್ವಸಂಸ್ಥೆಯ ವರದಿಯನ್ನು ಉಲ್ಲೇಖಿಸಿದ ಅವರು, ಸಂಘರ್ಷ ವಲಯಗಳಿಂದ 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು 75 ಕೋಟಿ ಮಹಿಳೆಯರು ಮತ್ತು ಬಾಲಕಿಯರು ವಾಸಿಸುತ್ತಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ, ಸಂಘರ್ಷಗಳಿಗೆ ಸಂಬಂಧಿಸಿದ ಲೈಂಗಿಕ ಹಿಂಸಾಚಾರದ ದೃಢೀಕೃತ ಪ್ರಕರಣಗಳು ಒಂದೇ ವರ್ಷದಲ್ಲಿ ದ್ವಿಗುಣಕ್ಕಿಂತಲೂ ಹೆಚ್ಚಾಗಿವೆ ಎಂಬ ಆತಂಕಕಾರಿ ಅಂಶವನ್ನೂ ಪ್ರಸ್ತಾಪಿಸಿದರು.

ದಕ್ಷಿಣ ಸುಡಾನ್‌ನಲ್ಲಿನ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಸೇವೆ ಸಲ್ಲಿಸಿದ ಭಾರತೀಯ ಸೇನೆಯ ಮೇಜರ್‌ಗಳಾದ ಮೌಯಿಜ್ ಯಾಸೀನ್ ಮತ್ತು ಸೋನಿಯಾ ದೇವೇಂದ್ರ ನೆವಾಸ್ಕರ್ ಅವರ ಕೊಡುಗೆಯನ್ನು ಹರೀಶ್ ಶ್ಲಾಘಿಸಿದರು. ಮಹಿಳಾ ಶಾಂತಿಪಾಲಕರು ಹಾಗೂ ನಾಗರಿಕರ ಸುರಕ್ಷ

Share This Article