ಥಿಯೇಟರ್ ಬಳಿಕ OTTಗೆ ‘ದಿ ಡೆವಿಲ್’: ಜುಲೈ 17ರಿಂದ ZEE5 ಕನ್ನಡದಲ್ಲಿ ಸ್ಟ್ರೀಮಿಂಗ್

1 Min Read
1 Min Read

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಆ್ಯಕ್ಷನ್ ಚಿತ್ರ ‘ದಿ ಡೆವಿಲ್’ (The Devil) ಈಗ ಡಿಜಿಟಲ್ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಚಿತ್ರವು ತನ್ನ ಥಿಯೇಟರ್ ಪ್ರದರ್ಶನದ ಬಳಿಕ ಜುಲೈ 17ರಿಂದ ZEE5 ಕನ್ನಡ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.

‘ಮಿಲನ’ ಹಾಗೂ ‘ತಾರಕ್’ ಖ್ಯಾತಿಯ ನಿರ್ದೇಶಕ ಪ್ರಕಾಶ್ ವೀರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ದರ್ಶನ್ ಕೃಷ್ಣ ಮತ್ತು ಧನುಷ್ ಎಂಬ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಧನುಷ್ ಪಾತ್ರದಲ್ಲಿನ ಅವರ ಆ್ಯಕ್ಷನ್ ಹಾಗೂ ತೀವ್ರ ಅಭಿನಯ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ಅಭಿನಯಿಸಿದ್ದು, ಮಹೇಶ್ ಮಂಜ್ರೇಕರ್, ವಿನಯ್ ಗೌಡ, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ ಹಾಗೂ ಹುಲಿ ಕಾರ್ತಿಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಸುದಾಕರ್ ಎಸ್. ರಾಜ್ ಅವರ ಛಾಯಾಗ್ರಹಣ ಚಿತ್ರದ ದೃಶ್ಯ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ.

ಥಿಯೇಟರ್‌ನಲ್ಲಿ ಬಿಡುಗಡೆಯಾದ ಬಳಿಕ ಇದೀಗ OTTಗೆ ಕಾಲಿಡುತ್ತಿರುವ ‘ದಿ ಡೆವಿಲ್’, ಇತ್ತೀಚಿನ ಕನ್ನಡ ಸಿನಿಮಾಗಳ ಡಿಜಿಟಲ್ ಬಿಡುಗಡೆಯ ಪಟ್ಟಿಗೆ ಸೇರ್ಪಡೆಯಾಗಿದೆ. ದೊಡ್ಡ ಪರದೆಯಲ್ಲಿ ಸಿನಿಮಾ ವೀಕ್ಷಿಸಲು ಸಾಧ್ಯವಾಗದ ಪ್ರೇಕ್ಷಕರಿಗೆ ಈಗ ಮನೆಯಿಂದಲೇ ದರ್ಶನ್ ಅವರ ಡಬಲ್ ರೋಲ್ ಅಭಿನಯವನ್ನು ಆಸ್ವಾದಿಸುವ ಅವಕಾಶ ಸಿಗಲಿದೆ.

Share This Article