ಇ-ವಾಹನಗಳನ್ನು ದೂರದಿಂದಲೇ ಸ್ಥಗಿತಗೊಳಿಸುವ ಆರೋಪ; ಮೂರು ಮೊಬೈಲ್ ಆ್ಯಪ್‌ಗಳಿಗೆ ಕೇಂದ್ರ ನಿಷೇಧ

1 Min Read
1 Min Read

ಭದ್ರತಾ ಕಾರಣಕ್ಕೆ ಮೂರು ಇ-ವಾಹನ ಆ್ಯಪ್‌ಗಳ ವಿರುದ್ಧ ಕೇಂದ್ರದ ಕಠಿಣ ಕ್ರಮ; ಪ್ಲೇ ಸ್ಟೋರ್, ಆಪ್ ಸ್ಟೋರ್‌ನಿಂದ ತೆರವು

ಭದ್ರತಾ ಆತಂಕದ ಹಿನ್ನೆಲೆಯಲ್ಲಿ BAT-BMS, Epoch-i-ion ಹಾಗೂ Lossigy ಎಂಬ ಮೂರು ಇ-ವಾಹನ (ಇಲೆಕ್ಟ್ರಿಕ್ ವಾಹನ) ಮೊಬೈಲ್ ಆ್ಯಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ತೆರವುಗೊಳಿಸಲು ಕೇಂದ್ರ ಸರ್ಕಾರ ಆದೇಶಿಸಿದೆ.

ಈ ಆ್ಯಪ್‌ಗಳನ್ನು ಬಳಸಿಕೊಂಡು ಇ-ರಿಕ್ಷಾ ಸೇರಿದಂತೆ ವಿದ್ಯುತ್ ಚಾಲಿತ ವಾಹನಗಳನ್ನು ದೂರದಿಂದಲೇ (Remote) ಸ್ಥಗಿತಗೊಳಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೂಲಗಳ ಪ್ರಕಾರ, ಭದ್ರತಾ ಅಪಾಯ ಹಾಗೂ ದುರುಪಯೋಗದ ಸಾಧ್ಯತೆಯನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಂಬಂಧಿತ ಆ್ಯಪ್‌ಗಳನ್ನು ಎರಡೂ ಪ್ರಮುಖ ಆ್ಯಪ್ ಸ್ಟೋರ್‌ಗಳಿಂದ ತೆಗೆದುಹಾಕುವಂತೆ ಸೂಚನೆ ನೀಡಲಾಗಿದೆ.

ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ಸಂಬಂಧಿತ ಬೆಳವಣಿಗೆಗಳ ಮೇಲೆ ಸರ್ಕಾರ ನಿಕಟವಾಗಿ ನಿಗಾ ವಹಿಸಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಗಳ ಸತ್ಯಾಸತ್ಯತೆ ಹಾಗೂ ಆ್ಯಪ್‌ಗಳ ಕಾರ್ಯವೈಖರಿಯ ಕುರಿತು ತನಿಖೆ ಪೂರ್ಣಗೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment