ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು **‘ನಶಾ ಮುಕ್ತ ಭಾರತ ಅಭಿಯಾನ’**ವು ಜನರ ಸಕ್ರಿಯ ಭಾಗವಹಿಸುವಿಕೆಯಿಂದ ದೇಶವ್ಯಾಪಿ ಜನಾಂದೋಲನವಾಗಿ ರೂಪುಗೊಂಡಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಬಿ.ಎಲ್. ವರ್ಮಾ ಅವರು ಮಾದಕ ವ್ಯಸನ ಮುಕ್ತ ಭಾರತದ ಅಗತ್ಯತೆ ಕುರಿತು ಬರೆದ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ದೇಶವನ್ನು ಮಾದಕ ವ್ಯಸನ ಮುಕ್ತಗೊಳಿಸುವ ಹಾಗೂ ‘ವಿಕಸಿತ ಭಾರತ’ ನಿರ್ಮಿಸುವ ಸಂಕಲ್ಪದಲ್ಲಿ ಪ್ರತಿಯೊಬ್ಬ ನಾಗರಿಕರೂ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.
ತಮ್ಮ ಲೇಖನದಲ್ಲಿ ಸಚಿವ ಬಿ.ಎಲ್. ವರ್ಮಾ, ಮಾದಕ ವ್ಯಸನವು ಭಾರತದ ಯುವಜನತೆಯ ಭವಿಷ್ಯ ಹಾಗೂ ರಾಷ್ಟ್ರದ ಪ್ರಗತಿಗೆ ಗಂಭೀರ ಸವಾಲಾಗಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ವಿಶೇಷವಾಗಿ ಯುವಜನರು ಈ ರಾಷ್ಟ್ರೀಯ ಅಭಿಯಾನದ ಭಾಗವಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.
ದೇಶದ ಪ್ರತಿಯೊಬ್ಬ ನಾಗರಿಕರೂ ಒಗ್ಗೂಡಿ ಮಾದಕ ವ್ಯಸನ ನಿರ್ಮೂಲನೆಯ ಸಂಕಲ್ಪವನ್ನು ಜನಾಂದೋಲನವಾಗಿಸಬೇಕು. ಈ ಸಂಕಲ್ಪವೇ ‘ವಿಕಸಿತ ಭಾರತ’ ನಿರ್ಮಾಣಕ್ಕೆ ಭದ್ರ ಅಡಿಪಾಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


