ಲಂಡನ್‌ನಲ್ಲಿ ಪಿಯೂಷ್ ಗೋಯಲ್‌ಗೆ ವಿಶೇಷ ಗೌರವ; ಭಾರತ–ಬ್ರಿಟನ್ ಸಂಬಂಧ ಬಲಪಡಿಸಿದ್ದಕ್ಕೆ ಪ್ರಶಸ್ತಿ

1 Min Read
1 Min Read

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರಿಗೆ ಭಾರತ–ಬ್ರಿಟನ್ (ಯುಕೆ) ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿದ ನಾಯಕತ್ವಕ್ಕಾಗಿ ಲಂಡನ್‌ನಲ್ಲಿ ನಡೆದ ವಾರ್ಷಿಕ ಯುಕೆ–ಇಂಡಿಯಾ ಅವಾರ್ಡ್ಸ್ 2026 ಸಮಾರಂಭದಲ್ಲಿ ‘ಎಕ್ಸೆಪ್ಷನಲ್ ಲೀಡರ್‌ಶಿಪ್ ಇನ್ ಎಲಿವೇಟಿಂಗ್ ಯುಕೆ–ಇಂಡಿಯಾ ರಿಲೇಷನ್ಸ್’ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪಿಯೂಷ್ ಗೋಯಲ್, ಈ ಗೌರವವು ಸರ್ಕಾರ, ಕೈಗಾರಿಕೆ, ಶಿಕ್ಷಣ, ಸಂಸ್ಕೃತಿ ಹಾಗೂ ಭಾರತೀಯ ವಲಸೆ ಸಮುದಾಯ ಸೇರಿದಂತೆ ಭಾರತ–ಯುಕೆ ಸಂಬಂಧಗಳನ್ನು ಗಟ್ಟಿಗೊಳಿಸಲು ಶ್ರಮಿಸಿದ ಎಲ್ಲರಿಗೂ ಸಲ್ಲುತ್ತದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಪ್ರಶಸ್ತಿ ಪಡೆದ ಇತರ ಗಣ್ಯರಿಗೂ ಅಭಿನಂದನೆ ಸಲ್ಲಿಸಿದ ಅವರು, ಭಾರತ–ಯುಕೆ ನಡುವಿನ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (CETA) ಜುಲೈ 15ರಿಂದ ಜಾರಿಗೆ ಬರಲಿದ್ದು, ಇದು ಬ್ರಿಟನ್ ಸಂಸತ್ತಿನ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಜಾರಿಗೆ ಬರುತ್ತಿರುವ ವ್ಯಾಪಾರ ಒಪ್ಪಂದವಾಗಲಿದೆ ಎಂದು ಹೇಳಿದ್ದಾರೆ.

Share This Article
Leave a Comment