ಫ್ರಾನ್ಸ್‌ ಅಬ್ಬರಕ್ಕೆ ನಾರ್ವೆ ಮಂಕು; 4-1 ಜಯದೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನ

1 Min Read
1 Min Read

ಫಿಫಾ ವಿಶ್ವಕಪ್: ನಾರ್ವೆಗೆ ಫ್ರಾನ್ಸ್‌ ಚಿತ್ತ; ಗುಂಪು ‘I’ನಲ್ಲಿ ಅಗ್ರಸ್ಥಾನ ಖಚಿತ

ಫಿಫಾ ವಿಶ್ವಕಪ್ 2026ರ ಗುಂಪು ‘I’ ಹಂತದ ಕೊನೆಯ ಪಂದ್ಯದಲ್ಲಿ ಫ್ರಾನ್ಸ್‌ ತಂಡ ನಾರ್ವೆಯನ್ನು 4-1 ಗೋಲುಗಳಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ನಾಕೌಟ್ ಹಂತಕ್ಕೆ ಭರ್ಜರಿಯಾಗಿ ಪ್ರವೇಶಿಸಿದೆ. ಅಮೆರಿಕದ ಮ್ಯಾಸಚೂಸೆಟ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಫ್ರಾನ್ಸ್‌ ಆರಂಭದಿಂದಲೇ ಪ್ರಾಬಲ್ಯ ಮೆರೆದಿತು.

ಸ್ಟಾರ್ ಆಟಗಾರ ಉಸ್ಮಾನ್ ಡೆಂಬೆಲೆ ಮೊದಲಾರ್ಧದಲ್ಲೇ ಹ್ಯಾಟ್ರಿಕ್ ಸಾಧಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಅವರು 7ನೇ, 20ನೇ ಹಾಗೂ 32ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ನಂತರ ಡಿಸೈರ್ ಡೂಯೆ ಮತ್ತೊಂದು ಗೋಲು ಸೇರಿಸಿ ಫ್ರಾನ್ಸ್‌ನ ಗೆಲುವನ್ನು ಮತ್ತಷ್ಟು ಭದ್ರಪಡಿಸಿದರು.

ನಾರ್ವೆ ಪರ ಏಕೈಕ ಗೋಲನ್ನು ಥೆಲೋನಿಯಸ್ ಆಸ್‌ಗಾರ್ಡ್ ದಾಖಲಿಸಿದರು. ಸೋಲು ಕಂಡರೂ 6 ಅಂಕಗಳೊಂದಿಗೆ ನಾರ್ವೆ ಕೂಡ ಅಂತಿಮ 32ರ ಹಂತಕ್ಕೆ ಅರ್ಹತೆ ಪಡೆದಿದೆ.

ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಸೆನೆಗಲ್ ತಂಡ ಇರಾಕ್ ವಿರುದ್ಧ 5-0 ಗೋಲುಗಳ ಭರ್ಜರಿ ಜಯ ದಾಖಲಿಸಿತು. ಪಾಪೆ ಗೆಯೆ ಎರಡು ಗೋಲುಗಳನ್ನು ಗಳಿಸಿದರೆ, ಹಬೀಬ್ ಡಿಯಾರಾ, ಇಸ್ಮೈಲಾ ಸರ್ ಹಾಗೂ ಇಲಿಮಾನ್ ಎನ್‌ಡಿಯಾಯೆ ತಲಾ ಒಂದು ಗೋಲು ದಾಖಲಿಸಿದರು.

ಈ ಗೆಲುವಿನೊಂದಿಗೆ ಸೆನೆಗಲ್, ಅತ್ಯುತ್ತಮ ಮೂರನೇ ಸ್ಥಾನ ಪಡೆದ ತಂಡಗಳ ಪೈಕಿ ಒಂದಾಗಿ ನಾಕೌಟ್ ಹಂತ ಪ್ರವೇಶಿಸುವ ನಿರೀಕ್ಷೆಯನ್ನು ಜೀವಂತವಾಗಿರಿಸಿಕೊಂಡಿದೆ.

Share This Article