“ತ್ರಿಷಾ–ವಿಜಯ್ ಸಂಬಂಧಕ್ಕೆ ಟ್ವಿಸ್ಟ್? ಸೋಷಿಯಲ್ ಮೀಡಿಯಾದಲ್ಲೇ ಅಂತರ ಹೆಚ್ಚಿದ ಶಂಕೆ”

1 Min Read
1 Min Read

ನಟಿ Trisha Krishnan ಮತ್ತು ನಟ ಹಾಗೂ ಈಗಿನ ಸಿಎಂ ವಿಜಯ್ ನಡುವಿನ ಸಂಬಂಧದ ಕುರಿತು ನಡೆಯುತ್ತಿರುವ ಚರ್ಚೆಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಗರಿಗೆದರಿವೆ.

ಹಲವು ತಿಂಗಳುಗಳಿಂದ ಇಬ್ಬರ ಬಗ್ಗೆ ಅಫವಾಹಗಳು ಮತ್ತು ಊಹಾಪೋಹಗಳು ಹರಡುತ್ತಿದ್ದವು. ಅವರು ಒಟ್ಟಿಗೆ ನಟಿಸಿದ Ghilli, Leo ಮತ್ತು GOAT ಚಿತ್ರಗಳ ಬಳಿಕ ಇಬ್ಬರ ನಡುವಿನ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಹೆಚ್ಚಾಗಿದ್ದವು.

ಇತ್ತೀಚೆಗೆ, ತ್ರಿಷಾ ಇನ್‌ಸ್ಟಾಗ್ರಾಮ್‌ನಲ್ಲಿ ಸಿಎಂ ವಿಜಯ್ ಅವರನ್ನು ಅನ್‌ಫಾಲೋ ಮಾಡಿದರೆಂಬ ಸುದ್ದಿ ಹರಡಿದ್ದು, ಈ ವಿಷಯ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಇದಕ್ಕೂ ಮೊದಲು, ವಿಜಯ್ ಅವರ 52ನೇ ಹುಟ್ಟುಹಬ್ಬದ ದಿನ ತ್ರಿಷಾ ಯಾವುದೇ ಶುಭಾಶಯ ಪೋಸ್ಟ್ ಮಾಡಿಲ್ಲ ಎಂಬುದೂ ಗಮನ ಸೆಳೆದಿದೆ.

ಹಿಂದಿನ ವರ್ಷಗಳಲ್ಲಿ ತ್ರಿಷಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಜೊತೆಗಿನ ಅಪರೂಪದ ಫೋಟೋಗಳನ್ನು ಹಂಚಿಕೊಂಡು, ಹೃದಯಸ್ಪರ್ಶಿ ಶುಭಾಶಯಗಳನ್ನು ನೀಡುತ್ತಿದ್ದರು. ಆದರೆ ಈ ಬಾರಿ ಅವರ ಮೌನ ಮತ್ತು ಸೋಷಿಯಲ್ ಮೀಡಿಯಾ ಅಂತರ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಇದೇ ವೇಳೆ ಇಬ್ಬರೂ ಈ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿರುವ ವಿಷಯ ಮತ್ತು ಹುಟ್ಟುಹಬ್ಬದ ಶುಭಾಶಯಗಳ ಗೈರುಹಾಜರಾತಿ ಬಗ್ಗೆ ಅಭಿಮಾನಿಗಳ ನಡುವೆ ವಿಭಿನ್ನ ಚರ್ಚೆಗಳು ನಡೆಯುತ್ತಿವೆ.

Share This Article