ರೆಡ್ ಫೋರ್ಟ್ ಸ್ಫೋಟದ ಪೀಡಿತರಿಗೆ ಪರಿಹಾರ ಘೋಷಿಸಿದ ದೆಹಲಿ ಸರ್ಕಾರ – ಮೃತರ ಕುಟುಂಬಗಳಿಗೆ ₹10 ಲಕ್ಷ ನೆರವು!

1 Min Read
1 Min Read

ನವದೆಹಲಿ, ನ.11:

ದೆಹಲಿಯಲ್ಲಿ ನಡೆದ ರೆಡ್ ಫೋರ್ಟ್ ಸ್ಫೋಟ ಘಟನೆಯಿಂದ ಮೃತಪಟ್ಟವರು ಮತ್ತು ಗಾಯಗೊಂಡವರ ಕುಟುಂಬಗಳಿಗೆ ದೆಹಲಿ ಸರ್ಕಾರ ಪರಿಹಾರ ಧನ ಘೋಷಿಸಿದೆ.

ಮುಖ್ಯಮಂತ್ರಿ ರೇಖಾ ಗುಪ್ತಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ₹10 ಲಕ್ಷ ರೂ. ಪರಿಹಾರ, ಶಾಶ್ವತವಾಗಿ ಅಂಗವಿಕಲರಾದವರಿಗೆ ₹5 ಲಕ್ಷ ರೂ., ಮತ್ತು ತೀವ್ರವಾಗಿ ಗಾಯಗೊಂಡವರಿಗೆ ₹2 ಲಕ್ಷ ರೂ. ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಯವರು ಜೊತೆಗೆ,

“ಗಾಯಗೊಂಡ ಎಲ್ಲರಿಗೂ ಸರಿಯಾದ ಮತ್ತು ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ರಾಜ್ಯ ಸರ್ಕಾರ ಸಂಪೂರ್ಣ ಹೊಣೆ ಹೊರುತ್ತದೆ,”
ಎಂದು ತಿಳಿಸಿದ್ದಾರೆ.

ಇದಕ್ಕೂ ಜೊತೆಗೆ, ಭದ್ರತಾ ಕಾರಣಗಳಿಂದ ರೆಡ್ ಫೋರ್ಟ್ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನವನ್ನು ಮುಂದಿನ ಆದೇಶದವರೆಗೆ ಮುಚ್ಚಲಾಗುವುದು ಎಂದು ದೆಹಲಿ ಮೆಟ್ರೋ ರೈಲು ನಿಗಮ (DMRC) ಪ್ರಕಟಿಸಿದೆ.

ಘಟನೆಯ ನಂತರ ರಾಜಧಾನಿಯಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಪೊಲೀಸರು ಮತ್ತು ಸ್ಪೋಟಕ ನಿರೋಧಕ ದಳಗಳು ತನಿಖೆ ಮುಂದುವರಿಸುತ್ತಿವೆ.

Share This Article
Leave a Comment