ಭದ್ರತಾ ಕಾರಣಕ್ಕೆ ದೆಹಲಿಯ 17 ಮೆಟ್ರೋ ನಿಲ್ದಾಣಗಳು ತಾತ್ಕಾಲಿಕ ಬಂದ್; DMRC ಪ್ರಕಟಣೆ

1 Min Read
1 Min Read

ನವದೆಹಲಿ: ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಭದ್ರತಾ ಕಾರಣಗಳಿಂದ ದೆಹಲಿ ಮೆಟ್ರೋ ರೈಲು ನಿಗಮ (DMRC) ಇಂದಿನಿಂದ ಬೆಳಿಗ್ಗೆ 7.30 ಗಂಟೆಯಿಂದ ಜಾರಿಗೆ ಬರುವಂತೆ 17 ಮೆಟ್ರೋ ನಿಲ್ದಾಣಗಳನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಪ್ರಕಟಿಸಿದೆ.

ಮುಚ್ಚಲಾಗಿರುವ ಮೆಟ್ರೋ ನಿಲ್ದಾಣಗಳು ಇವು:

  • ಲೋಕ ಕಲ್ಯಾಣ ಮಾರ್ಗ್
  • ರಾಜೀವ್ ಚೌಕ್
  • ಪಟೇಲ್ ಚೌಕ್
  • ರಾಮಕೃಷ್ಣ ಆಶ್ರಮ ಮಾರ್ಗ್
  • ಬರಾಖಂಬಾ ರಸ್ತೆ
  • ಸುಪ್ರೀಂ ಕೋರ್ಟ್
  • ಸೇವಾ ತೀರ್ಥ್
  • ಜನಪಥ್
  • ಝಂಡೇವಾಲನ್
  • ಮಂಡಿ ಹೌಸ್
  • ಸೆಂಟ್ರಲ್ ಸೆಕ್ರೆಟೇರಿಯಟ್
  • ಐಟಿಒ
  • ದೆಹಲಿ ಗೇಟ್
  • ಇಂದ್ರಪ್ರಸ್ಥ
  • ಖಾನ್ ಮಾರ್ಕೆಟ್
  • ಜೋರ್ ಬಾಗ್
  • ಶಿವಾಜಿ ಸ್ಟೇಡಿಯಂ

ಆದರೆ ರಾಜೀವ್ ಚೌಕ್, ಮಂಡಿ ಹೌಸ್ ಹಾಗೂ ಸೆಂಟ್ರಲ್ ಸೆಕ್ರೆಟೇರಿಯಟ್ ನಿಲ್ದಾಣಗಳಲ್ಲಿ ಇಂಟರ್‌ಚೇಂಜ್ (ಮಾರ್ಗ ಬದಲಾವಣೆ) ಸೌಲಭ್ಯ ಎಂದಿನಂತೆ ಲಭ್ಯವಿರುತ್ತದೆ ಎಂದು DMRC ಸ್ಪಷ್ಟಪಡಿಸಿದೆ.

ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಮುಂದಿನ ಆದೇಶ ಹೊರಡಿಸಲಾಗುವುದು ಎಂದು DMRC ತಿಳಿಸಿದೆ.

Share This Article