U17 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಿಂಚು: ನಿಕಿತಾಗೆ ಬೆಳ್ಳಿ, ಕಾಮ್ನಾ-ಗರಿಮಾಗೆ ಕಂಚು

1 Min Read
1 Min Read

ಬಾಕು (ಅಜರ್‌ಬೈಜಾನ್): ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆದ U17 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ನಲ್ಲಿ ಭಾರತೀಯ ಮಹಿಳಾ ಕುಸ್ತಿಪಟುಗಳು ಗಮನಾರ್ಹ ಸಾಧನೆ ಮಾಡಿದ್ದು, ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ಭಾರತ ತನ್ನದಾಗಿಸಿಕೊಂಡಿದೆ.

57 ಕೆಜಿ ವಿಭಾಗದ ಫೈನಲ್‌ನಲ್ಲಿ ನಿಕಿತಾ ಸೆಹ್ರಾವತ್, ಅಮೆರಿಕದ ಎಪೆನೆಸಾ ಎಲಿಸನ್ ವಿರುದ್ಧ 0-6 ಅಂತರದಿಂದ ಸೋಲು ಅನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

49 ಕೆಜಿ ವಿಭಾಗದ ಕಂಚಿನ ಪದಕದ ಪೈಪೋಟಿಯಲ್ಲಿ ಕಾಮ್ನಾ ಬಬಲ್, ರಷ್ಯಾದ ಇರಿನಾ ತ್ಸೈಡೆವಾ ಅವರನ್ನು 3-2 ಅಂತರದಿಂದ ಮಣಿಸಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟರು.

ಇನ್ನೊಂದೆಡೆ, 73 ಕೆಜಿ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಗರಿಮಾ, ಸ್ಪೇನ್‌ನ ಪೌಲಾ ಬೆನೈಕ್ಸಾ ಪೆರೆಜ್ ಅವರನ್ನು ತಾಂತ್ರಿಕ ಶ್ರೇಷ್ಠತೆ (Technical Superiority) ಆಧಾರದ ಮೇಲೆ ಸೋಲಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಈ ಸಾಧನೆಯೊಂದಿಗೆ U17 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಒಂದು ಬೆಳ್ಳಿ ಮತ್ತು ಎರಡು ಕಂಚು ಸೇರಿದಂತೆ ಒಟ್ಟು ಮೂರು ಪದಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ.

Share This Article