ಏಷ್ಯಾ ಷೇರುಪೇಟೆಗಳಲ್ಲಿ ಭರ್ಜರಿ ಏರಿಕೆ; ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರವೃತ್ತಿ

1 Min Read
1 Min Read

ನವದೆಹಲಿ: ಏಷ್ಯಾದ ಪ್ರಮುಖ ಷೇರುಪೇಟೆಗಳು ಶುಕ್ರವಾರ ಉತ್ತಮ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿದರೆ, ಯುರೋಪಿನ ಪ್ರಮುಖ ಷೇರುಪೇಟೆಗಳು ಮಿಶ್ರ ಪ್ರವೃತ್ತಿ ತೋರಿದವು.

ದಕ್ಷಿಣ ಕೊರಿಯಾದ ಕೊಸ್ಪಿ ಸೂಚ್ಯಂಕ ಹಿಂದಿನ ವಹಿವಾಟಿನಲ್ಲಿ ತೀವ್ರ ಕುಸಿತ ಕಂಡಿದ್ದ ಸೆಮಿಕಂಡಕ್ಟರ್ ಷೇರುಗಳಲ್ಲಿ ಹೂಡಿಕೆದಾರರು ಹೆಚ್ಚಿನ ಖರೀದಿ ನಡೆಸಿದ ಪರಿಣಾಮ ಶೇ.5.8ರಷ್ಟು ಭರ್ಜರಿ ಏರಿಕೆ ದಾಖಲಿಸಿತು.

ಜಪಾನ್‌ನ ನಿಕ್ಕೈ 225 ಸೂಚ್ಯಂಕ ಶೇ.1.5, ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಶೇ.1.3, ಸಿಂಗಾಪುರದ ಸ್ಟ್ರೈಟ್ಸ್ ಟೈಮ್ಸ್ ಶೇ.0.5, ಚೀನಾದ ಶಾಂಘೈ ಕಾಂಪೊಸಿಟ್ ಸುಮಾರು ಶೇ.0.4 ಏರಿಕೆ ಕಂಡವು. ತೈವಾನ್‌ನ ತೈಎಕ್ಸ್ ಸೂಚ್ಯಂಕವೂ ಅಲ್ಪ ಪ್ರಮಾಣದಲ್ಲಿ ಏರಿಕೆಯೊಂದಿಗೆ ವಹಿವಾಟು ಮುಗಿಸಿತು.

ಇನ್ನೊಂದೆಡೆ, ಯುರೋಪಿನ ಪ್ರಮುಖ ಷೇರುಪೇಟೆಗಳಲ್ಲಿ ಮಿಶ್ರ ವಹಿವಾಟು ಕಂಡುಬಂದಿದೆ. ವರದಿಗಳು ಲಭ್ಯವಾಗುವ ವೇಳೆಗೆ ಜರ್ಮನಿಯ ಡ್ಯಾಕ್ಸ್ (DAX) ಸೂಚ್ಯಂಕ ಶೇ.0.4ಕ್ಕೂ ಹೆಚ್ಚು ಏರಿಕೆ ಕಂಡಿದ್ದರೆ, ಬ್ರಿಟನ್‌ನ ಎಫ್‌ಟಿಎಸ್‌ಇ 100 (FTSE 100) ಶೇ.0.3ಕ್ಕೂ ಹೆಚ್ಚು ಕುಸಿತ ಕಂಡಿತು. ಫ್ರಾನ್ಸ್‌ನ ಸಿಎಸಿ 40 (CAC 40) ಸೂಚ್ಯಂಕವೂ ಅಲ್ಪ ಪ್ರಮಾಣದಲ್ಲಿ ಇಳಿಕೆ ದಾಖಲಿಸಿತು.

Share This Article
Leave a Comment