ಇಂದು ಭಾರತ-ಇಂಗ್ಲೆಂಡ್ ದ್ವಿತೀಯ ಟಿ20 ಸೆಣಸಾಟ; ಮ್ಯಾಂಚೆಸ್ಟರ್‌ನಲ್ಲಿ ಗೆಲುವಿನ ಹುಡುಕಾಟ

1 Min Read
1 Min Read

ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಇಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ಒಂದೇ ಒಂದು ಎಸೆತವೂ ನಡೆಯದೆ ರದ್ದಾಗಿತ್ತು. ಹೀಗಾಗಿ ಎರಡೂ ತಂಡಗಳು ಇಂದು ಗೆಲುವಿನೊಂದಿಗೆ ಸರಣಿಯಲ್ಲಿ ಮುನ್ನಡೆ ಸಾಧಿಸುವ ಉದ್ದೇಶದಿಂದ ಕಣಕ್ಕಿಳಿಯಲಿವೆ.

ಸರಣಿಯ ಮೂರನೇ ಟಿ20 ಪಂದ್ಯ ಜುಲೈ 7ರಂದು ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ. ನಂತರ ಬ್ರಿಸ್ಟಲ್ ಹಾಗೂ ಸೌತಾಂಪ್ಟನ್ ನಗರಗಳು ನಾಲ್ಕನೇ ಮತ್ತು ಐದನೇ ಟಿ20 ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ಜುಲೈ 11ರಂದು ಸರಣಿ ಮುಕ್ತಾಯವಾಗಲಿದೆ.

ಟಿ20 ಸರಣಿ ಬಳಿಕ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮೂರು ಪಂದ್ಯಗಳ ಏಕದಿನ (ODI) ಸರಣಿಯಲ್ಲಿ ಮುಖಾಮುಖಿಯಾಗಲಿವೆ.

Share This Article