ಮಲೇರಿಯಾ ನಿಯಂತ್ರಣಕ್ಕೆ ಜಾರ್ಖಂಡ್ ಸರ್ಕಾರ ಕಟ್ಟುನಿಟ್ಟಿನ ಕ್ರಮ; ರಾಜ್ಯಾದ್ಯಂತ ಆರೋಗ್ಯ ಎಚ್ಚರಿಕೆ

1 Min Read
1 Min Read

ಮಲೇರಿಯಾ ಸಾವಿನ ಬೆನ್ನಲ್ಲೇ ಜಾರ್ಖಂಡ್‌ನಲ್ಲಿ ಆರೋಗ್ಯ ಹೈ ಅಲರ್ಟ್

ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ (East Singhbhum) ಜಿಲ್ಲೆಯಲ್ಲಿ ಮಲೇರಿಯಾಗೆ ಕನಿಷ್ಠ ನಾಲ್ವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ಆರೋಗ್ಯ ಹೈ ಅಲರ್ಟ್ ಘೋಷಿಸಿದೆ.

ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕಾಗಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಬಾಧಿತ ಪ್ರದೇಶಗಳಲ್ಲಿ ಜ್ವರ ಸಮೀಕ್ಷೆ ನಡೆಸುವುದು, ತ್ವರಿತ ಮಲೇರಿಯಾ ಪರೀಕ್ಷೆ (Rapid Test), ಸೋಂಕಿತರಿಗೆ ಕೂಡಲೇ ಚಿಕಿತ್ಸೆ ಒದಗಿಸುವುದು ಹಾಗೂ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ವಿಳಂಬವಿಲ್ಲದೆ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದೆ.

ಹೆಚ್ಚಿನ ಅಪಾಯ ಇರುವ ಗ್ರಾಮಗಳಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಸಿಬ್ಬಂದಿಗೆ ರ್ಯಾಪಿಡ್ ಡಯಾಗ್ನೋಸ್ಟಿಕ್ ಟೆಸ್ಟ್ (RDT) ಕಿಟ್‌ಗಳು ಮತ್ತು ಮಲೇರಿಯಾ ವಿರೋಧಿ ಔಷಧಗಳನ್ನು ಪೂರೈಸಲಾಗುತ್ತದೆ. ಜೊತೆಗೆ ಕೀಟನಾಶಕ ಸಿಂಪಡಣೆ ಮತ್ತು ಫಾಗಿಂಗ್ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ.

ರೋಗದ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮೂರು ಹಂತದ ಮೇಲ್ವಿಚಾರಣಾ ವ್ಯವಸ್ಥೆ (Three-tier Review Mechanism) ಜಾರಿಗೊಳಿಸಲಾಗಿದ್ದು, ಜಿಲ್ಲಾಡಳಿತಗಳು ನಿರಂತರವಾಗಿ ಪರಿಸ್ಥಿತಿಯನ್ನು ಪರಿಶೀಲಿಸುವುದರ ಜೊತೆಗೆ ಸಾರ್ವಜನಿಕರಲ್ಲಿ ಜಾಗೃತಿ ಅಭಿಯಾನಗಳನ್ನು ನಡೆಸುವಂತೆ ಸೂಚಿಸಲಾಗಿದೆ.

Share This Article
Leave a Comment