ಭದ್ರತೆಯ ನಡುವೆ ಅಮರನಾಥ ಯಾತ್ರೆ ಆರಂಭ; ಮೊದಲ ತಂಡಕ್ಕೆ ಎಲ್‌ಜಿ ಮನೋಜ್ ಸಿನ್ಹಾ ಚಾಲನೆ

1 Min Read
1 Min Read

ಅಮರನಾಥ ಯಾತ್ರೆಗೆ ಚಾಲನೆ: 4,822 ಭಕ್ತರ ಮೊದಲ ತಂಡಕ್ಕೆ ಹಸಿರು ನಿಶಾನೆ

ಜಮ್ಮು-ಕಾಶ್ಮೀರದ ವಾರ್ಷಿಕ ಶ್ರೀ ಅಮರನಾಥ ಯಾತ್ರೆಗೆ ಇಂದು ಅಧಿಕೃತ ಚಾಲನೆ ದೊರೆತಿದ್ದು, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸ ಮೂಲ ಶಿಬಿರದಿಂದ ಮೊದಲ ತಂಡದ ಯಾತ್ರಿಕರಿಗೆ ಹಸಿರು ನಿಶಾನೆ ತೋರಿದರು.

ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯ ನಡುವೆ ಮೊದಲ ತಂಡವನ್ನು ಪಹಲ್ಗಾಮ್ ಮತ್ತು ಬಾಲ್ತಾಲ್ ಎಂಬ ಎರಡು ಮಾರ್ಗಗಳ ಮೂಲಕ ಪವಿತ್ರ ಅಮರನಾಥ ಗುಹೆಯತ್ತ ಕಳುಹಿಸಲಾಯಿತು.

ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ ಭಕ್ತರಿಂದ ಭಗವತಿ ನಗರ ಯಾತ್ರಿ ಶಿಬಿರದಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಗಿತ್ತು. ‘ಬಮ್ ಬಮ್ ಭೋಲೆ’ ಘೋಷಣೆಗಳ ನಡುವೆ ಮೊದಲ ವಾಹನಗಳ ಕಾಫಿಲಾ ಪವಿತ್ರ ಯಾತ್ರೆಗೆ ಹೊರಟಿತು.

ಮೊದಲ ತಂಡದಲ್ಲಿ ಒಟ್ಟು 4,822 ಭಕ್ತರು ಭಾಗವಹಿಸಿದ್ದು, ಇವರಲ್ಲಿ 2,312 ಮಂದಿ ಬಾಲ್ತಾಲ್ ಮಾರ್ಗ ಹಾಗೂ 2,510 ಮಂದಿ ಪಹಲ್ಗಾಮ್ ಮಾರ್ಗ ಮೂಲಕ ಯಾತ್ರೆ ಆರಂಭಿಸಿದ್ದಾರೆ.

ಒಟ್ಟು ಯಾತ್ರಿಕರಲ್ಲಿ 3,707 ಪುರುಷರು, 816 ಮಹಿಳೆಯರು, 16 ಮಕ್ಕಳು, 246 ಸಾಧುಗಳು ಮತ್ತು 37 ಸಾಧ್ವಿಯರು ಸೇರಿದ್ದಾರೆ. ಇವರನ್ನು ಸಾಗಿಸಲು 147 ವಾಹನಗಳ ಕಾಫಿಲಾ ವ್ಯವಸ್ಥೆ ಮಾಡಲಾಗಿದೆ.

ಮೊದಲ ಬಾರಿಗೆ ಅಮರನಾಥ ಯಾತ್ರೆಗೆ ತೆರಳುತ್ತಿರುವ ಹಲವಾರು ಭಕ್ತರು ಜಮ್ಮು ಆಡಳಿತ ಕೈಗೊಂಡಿರುವ ಭದ್ರತಾ ಹಾಗೂ ಮೂಲಸೌಕರ್ಯ ವ್ಯವಸ್ಥೆಗಳನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment