ಮುಂಬೈನಲ್ಲಿ ಫಿಟ್ ಇಂಡಿಯಾ ಸೈಕ್ಲೋಥಾನ್‌ಗೆ ಮಂಸುಖ್ ಮಾಂಡವಿಯಾ ಚಾಲನೆ

1 Min Read
1 Min Read

ಮುಂಬೈ: ಆರೋಗ್ಯಕರ ಮತ್ತು ಸಕ್ರಿಯ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ. ಮಂಸುಖ್ ಮಾಂಡವಿಯಾ ಅವರು ಜೂನ್ 17ರಂದು ಮುಂಬೈನ ವರ್ಲಿ ಸೈಕಲ್ ಟ್ರ್ಯಾಕ್‌ನಲ್ಲಿ ವಿಶೇಷ ‘ಫಿಟ್ ಇಂಡಿಯಾ ಸೈಕ್ಲೋಥಾನ್’ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಲಿದ್ದಾರೆ.

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಮಾಹಿತಿ ಪ್ರಕಾರ, ಫಿಟ್ ಇಂಡಿಯಾ ಚಳವಳಿಯ ಭಾಗವಾಗಿರುವ ಈ ಸೈಕ್ಲೋಥಾನ್, ಸೈಕ್ಲಿಂಗ್, ಯೋಗ ಮತ್ತು ವಿವಿಧ ದೈಹಿಕ ಚಟುವಟಿಕೆಗಳ ಮೂಲಕ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ.

ಮುಂಬೈನ ಸುಂದರ ಕರಾವಳಿ ಪ್ರದೇಶದ ಹಿನ್ನಲೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸುಮಾರು 250 ಸೈಕ್ಲಿಸ್ಟ್‌ಗಳು ಸಚಿವರೊಂದಿಗೆ ಭಾಗವಹಿಸಿ ಸೈಕಲ್ ಸವಾರಿ ನಡೆಸಲಿದ್ದಾರೆ.

ಜೂನ್ 21ರಂದು ನಡೆಯಲಿರುವ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಜಾಗತಿಕ ಸಂಭ್ರಮಕ್ಕೆ ಈ ಸೈಕ್ಲೋಥಾನ್ ಮುನ್ನುಡಿಯಾಗಲಿದೆ. ಆರೋಗ್ಯ, ಫಿಟ್ನೆಸ್ ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಈ ಕಾರ್ಯಕ್ರಮವು ಯುವಜನತೆ ಸೇರಿದಂತೆ ಎಲ್ಲಾ ವಯೋಮಾನದ ಜನರನ್ನು ಆರೋಗ್ಯಕರ ಬದುಕಿನತ್ತ ಪ್ರೇರೇಪಿಸುವ ನಿರೀಕ್ಷೆಯಿದೆ.

Share This Article