ಭಾರತ-ಇಯು ಸಹಕಾರ ವಿಸ್ತರಣೆಗೆ ಚರ್ಚೆ: ಸಿಬಿ ಜಾರ್ಜ್-ಒಂಡ್ರೇ ಡೋಸ್ಟಾಲ್ ಭೇಟಿ

1 Min Read
1 Min Read

ನವದೆಹಲಿ, ಆಗಸ್ಟ್ 29: ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪಶ್ಚಿಮ ವಿಭಾಗದ ಕಾರ್ಯದರ್ಶಿ ಸಿಬಿ ಜಾರ್ಜ್ ಅವರು ಯುರೋಪಿಯನ್ ಸಂಸತ್ ಸದಸ್ಯ ಒಂಡ್ರೇ ಡೋಸ್ಟಾಲ್ ಅವರನ್ನು ಭೇಟಿಯಾಗಿ ಭಾರತ-ಯುರೋಪಿಯನ್ ಒಕ್ಕೂಟ (EU) ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಉಭಯ ನಾಯಕರು ವ್ಯಾಪಾರ, ಉದ್ಯಮ, ಆರೋಗ್ಯ, ಹಸಿರು ತಂತ್ರಜ್ಞಾನ, ಸಂಸ್ಕೃತಿ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಭಾರತ-ಇಯು ನಡುವಿನ ಜಂಟಿ ಸಹಕಾರವನ್ನು ವಿಸ್ತರಿಸುವ ಮಾರ್ಗಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿ ನೀಡಿದ್ದು, ಸಭೆಯಲ್ಲಿ ಭಾರತ ಮತ್ತು ಜೆಕ್ ಗಣರಾಜ್ಯ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸುವ ಮಾರ್ಗಗಳ ಬಗ್ಗೆಯೂ ಚರ್ಚೆ ನಡೆಯಿತು ಎಂದು ತಿಳಿಸಿದೆ.

ಭಾರತ-ಇಯು ಸಹಕಾರದ ವ್ಯಾಪ್ತಿಯನ್ನು ವಿಸ್ತರಿಸುವುದರ ಜೊತೆಗೆ, ಜೆಕ್ ಗಣರಾಜ್ಯದೊಂದಿಗೆ ಭಾರತದ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಮಾತುಕತೆ ಮಹತ್ವ ಪಡೆದುಕೊಂಡಿದೆ.

Share This Article