ಏಳು ವರ್ಷಗಳ ಬಳಿಕ ಮಧು ಸಿ. ನಾರಾಯಣನ್ ಹೊಸ ನಿರ್ದೇಶನ; ಶೀಘ್ರದಲ್ಲೇ ಚಿತ್ರದ ಚಿತ್ರೀಕರಣ ಆರಂಭ

1 Min Read
1 Min Read

ಚೆನ್ನೈ: ಮಲಯಾಳಂ ಚಿತ್ರರಂಗದ ಯುವ ನಟ ನಸ್ಲೆನ್ ಹಾಗೂ ‘ಕುಂಬಳಂಗಿ ನೈಟ್ಸ್’ ಖ್ಯಾತಿಯ ನಿರ್ದೇಶಕ ಮಧು ಸಿ. ನಾರಾಯಣನ್ ಒಟ್ಟಾಗಿ ಹೊಸ ಚಿತ್ರವೊಂದರಲ್ಲಿ ಕೈಜೋಡಿಸಿದ್ದಾರೆ. ಈ ಬಹುನಿರೀಕ್ಷಿತ ಯೋಜನೆಯನ್ನು ಸೋಮವಾರ ಅಧಿಕೃತವಾಗಿ ಘೋಷಿಸಲಾಗಿದೆ.

ನಿರ್ಮಾಪಕ ಅನಂತು ಎಸ್. ತಮ್ಮ ಸಾಮಾಜಿಕ ಜಾಲತಾಣದ ಮೂಲಕ ನಸ್ಲೆನ್ ಮತ್ತು ನಿರ್ದೇಶಕ ಮಧು ಸಿ. ನಾರಾಯಣನ್ ಅವರೊಂದಿಗೆ ಕಾಣಿಸಿಕೊಂಡಿರುವ ವಿಶೇಷ ವಿಡಿಯೊ ಬಿಡುಗಡೆ ಮಾಡಿ ಚಿತ್ರದ ಘೋಷಣೆ ಮಾಡಿದ್ದಾರೆ.

ಚಿತ್ರತಂಡದ ಮಾಹಿತಿ ಪ್ರಕಾರ, ಇನ್ನೂ ಹೆಸರಿಡದ ಈ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ಆದರೆ ಚಿತ್ರದ ಕಥೆ, ಪಾತ್ರವರ್ಗ ಹಾಗೂ ಇತರ ವಿವರಗಳನ್ನು ಇನ್ನಷ್ಟೇ ಪ್ರಕಟಿಸಲಾಗುವುದು.

ಈ ಚಿತ್ರವನ್ನು ಡಾ. ಅನಂತು ಪ್ರೊಡಕ್ಷನ್ಸ್ ಹಾಗೂ ಸೈಲೆಂಟ್ ಕ್ಯಾಟ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ವಿಶೇಷವೆಂದರೆ, ಸೈಲೆಂಟ್ ಕ್ಯಾಟ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಮೊದಲ ಸಿನಿಮಾ ಇದಾಗಿದೆ.

ನಿರ್ಮಾಪಕ ಅನಂತು ಎಸ್. ಅವರು ‘ಅತಿರಡಿ’ ಚಿತ್ರದ ಮೂಲಕ ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಜೊತೆಗೆ, ಮಲಯಾಳಂ ಡಿಜಿಟಲ್ ತಂಡ ಕರಿಕ್ಕು ನಿರ್ಮಿಸುತ್ತಿರುವ ಮೊದಲ ಚಿತ್ರ ಹಾಗೂ ’40 ಡೇಸ್ ಆಫ್ ಹೌಸ್ ಪಾರ್ಟಿ’ ಚಿತ್ರಕ್ಕೂ ಅವರು ಬೆಂಬಲ ನೀಡುತ್ತಿದ್ದಾರೆ.

2019ರಲ್ಲಿ ಬಿಡುಗಡೆಯಾದ ‘ಕುಂಬಳಂಗಿ ನೈಟ್ಸ್’ ಚಿತ್ರದ ಮೂಲಕ ರಾಷ್ಟ್ರವ್ಯಾಪಿ ಮೆಚ್ಚುಗೆ ಪಡೆದಿದ್ದ ನಿರ್ದೇಶಕ ಮಧು ಸಿ. ನಾರಾಯಣನ್, ಸುಮಾರು ಏಳು ವರ್ಷಗಳ ಬಳಿಕ ಮತ್ತೊಮ್ಮೆ ನಿರ್ದೇಶಕರಾಗಿ ಮರಳುತ್ತಿದ್ದಾರೆ. ಕಳೆದ ವರ್ಷವೇ 20ರಿಂದ 25 ವರ್ಷದೊಳಗಿನ ನಾಯಕಿಗಾಗಿ ಆಡಿಷನ್ ಘೋಷಿಸಿ ಈ ಯೋಜನೆಯ ಸುಳಿವು ನೀಡಿದ್ದರು.

ಇತ್ತೀಚೆಗೆ ‘ಮಾಲಿವುಡ್ ಟೈಮ್ಸ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಸ್ಲೆನ್, ‘ಬ್ಯಾಚುಲರ್ ಪಾರ್ಟಿ D’eux’, ‘ಟಿಕಿ ಟಾಕಾ’, ‘ಟಾರ್ಪಿಡೋ’ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ, ನಟ ಸೂರ್ಯ ಅಭಿನಯದ, ಜಿತು ಮಾಧವನ್ ನಿರ್ದೇಶನದ ಚಿತ್ರದ ಮೂಲಕ ಅವರು ತಮಿಳು ಚಿತ್ರರಂಗಕ್ಕೂ ಪದಾರ್ಪಣೆ ಮಾಡಲಿದ್ದಾರೆ.

Share This Article