ಪ್ರಯಾಣಿಕ ವಾಹನಗಳಿಗೆ ಹೊಸ ಇಂಧನ ದಕ್ಷತಾ ಮಾನದಂಡ; 2027 ಕರಡು ನಿಯಮ ಬಿಡುಗಡೆ

1 Min Read
1 Min Read

ನವದೆಹಲಿ: ಕೇಂದ್ರ ವಿದ್ಯುತ್ ಸಚಿವಾಲಯವು ಕಾರ್ಪೊರೇಟ್ ಸರಾಸರಿ ಇಂಧನ ದಕ್ಷತೆ (Corporate Average Fuel Economy – CAFE) 2027 ಕರಡು ನಿಯಮಾವಳಿಯನ್ನು ಸಾರ್ವಜನಿಕ ಹಾಗೂ ಸಂಬಂಧಿತ ವಲಯಗಳ ಸಮಾಲೋಚನೆಗಾಗಿ ಬಿಡುಗಡೆ ಮಾಡಿದೆ.

ಪ್ರಸ್ತಾವಿತ ನಿಯಮಗಳು 2027-28ರಿಂದ 2031-32ರ ಅವಧಿಯಲ್ಲಿ ದೇಶದಲ್ಲಿ ತಯಾರಾಗುವ ಅಥವಾ ಮಾರಾಟಕ್ಕಾಗಿ ಆಮದು ಮಾಡಲಾಗುವ M1 ವರ್ಗದ ಪ್ರಯಾಣಿಕ ವಾಹನಗಳಿಗೆ ಅನ್ವಯವಾಗಲಿವೆ.

M1 ವರ್ಗದ ವಾಹನಗಳು ಎಂದರೆ, ಚಾಲಕರ ಆಸನವನ್ನು ಹೊರತುಪಡಿಸಿ ಗರಿಷ್ಠ ಎಂಟು ಪ್ರಯಾಣಿಕರನ್ನು ಸಾಗಿಸಲು ವಿನ್ಯಾಸಗೊಳಿಸಲಾದ ಮೋಟಾರು ವಾಹನಗಳು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಕರಡು ನಿಯಮಗಳ ಕುರಿತು ವಾಹನ ತಯಾರಕರು, ಕೈಗಾರಿಕಾ ವಲಯದ ಪ್ರತಿನಿಧಿಗಳು, ಸಂಬಂಧಿತ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು ಮುಂದಿನ ತಿಂಗಳ 6ರೊಳಗೆ ತಮ್ಮ ಸಲಹೆಗಳು ಹಾಗೂ ಪ್ರತಿಕ್ರಿಯೆಗಳನ್ನು ಸಲ್ಲಿಸಬಹುದಾಗಿದೆ ಎಂದು ಕೇಂದ್ರ ವಿದ್ಯುತ್ ಸಚಿವಾಲಯ ತಿಳಿಸಿದೆ.

Share This Article