ಮುಂಬೈ: ದೇಶೀಯ ಷೇರುಪೇಟೆಯಲ್ಲಿ ಇಂದು ಮಾರಾಟದ ಒತ್ತಡ ಹೆಚ್ಚಾಗಿದ್ದು, ಪ್ರಮುಖ ಸೂಚ್ಯಂಕಗಳು ಭಾರೀ ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿವೆ. ಹೂಡಿಕೆದಾರರ ನಿರಾಸೆಯಿಂದ ಸೆನ್ಸೆಕ್ಸ್ 778 ಅಂಕೆ ಕುಸಿದು, ನಿಫ್ಟಿ 280 ಅಂಕೆ ಇಳಿಕೆಯಾಗಿದೆ.
ದಿನದ ವಹಿವಾಟಿನ ಅಂತ್ಯಕ್ಕೆ ಬಿಎಸ್‌ಇ ಸೆನ್ಸೆಕ್ಸ್ ಶೇ.1ರಷ್ಟು ಕುಸಿದು 74,004 ಅಂಕಗಳಿಗೆ ತಲುಪಿತು. ಇದೇ ವೇಳೆ ಎನ್‌ಎಸ್‌ಇ ನಿಫ್ಟಿ 280 ಅಂಕೆ ಅಥವಾ ಶೇ.1.2ರಷ್ಟು ಇಳಿಕೆ ಕಂಡು 23,119 ಅಂಕಗಳಲ್ಲಿ ವಹಿವಾಟು ಮುಗಿಸಿತು.
ಮಿಡ್‌ಕ್ಯಾಪ್, ಸ್ಮಾಲ್‌ಕ್ಯಾಪ್ ಸೂಚ್ಯಂಕಗಳಲ್ಲೂ ಕುಸಿತ
ಪ್ರಮುಖ ಸೂಚ್ಯಂಕಗಳಷ್ಟೇ ಅಲ್ಲದೆ, ವಿಶಾಲ ಮಾರುಕಟ್ಟೆಯಲ್ಲೂ ಮಾರಾಟದ ಒತ್ತಡ ಕಂಡುಬಂದಿದೆ.
ನಿಫ್ಟಿ ಮಿಡ್‌ಕ್ಯಾಪ್ 100 ಸೂಚ್ಯಂಕ ಶೇ.2.1ರಷ್ಟು ಕುಸಿದರೆ, ನಿಫ್ಟಿ ಸ್ಮಾಲ್‌ಕ್ಯಾಪ್ 100 ಸೂಚ್ಯಂಕ ಶೇ.2.4ರಷ್ಟು ಇಳಿಕೆ ದಾಖಲಿಸಿದೆ.
ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಷೇರುಗಳಲ್ಲೂ ಮಾರಾಟ ಹೆಚ್ಚಾದ ಹಿನ್ನೆಲೆಯಲ್ಲಿ ಒಟ್ಟಾರೆ ಮಾರುಕಟ್ಟೆ ವಹಿವಾಟಿನಲ್ಲಿ ಕುಸಿತದ ವಾತಾವರಣ ನಿರ್ಮಾಣವಾಗಿತ್ತು.


