ಭಾರತ-ಉಜ್ಬೇಕಿಸ್ತಾನ ಸಂಬಂಧ ವೇಗವಾಗಿ ಬಲಗೊಳ್ಳುತ್ತಿದೆ: ರಾಯಭಾರಿ ಸ್ಮಿತಾ ಪಂತ್

1 Min Read
1 Min Read

ನವದೆಹಲಿ, ಆಗಸ್ಟ್ 29: ಭಾರತ ಮತ್ತು ಉಜ್ಬೇಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧಗಳು ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಬಲಗೊಳ್ಳುತ್ತಿವೆ ಎಂದು ಉಜ್ಬೇಕಿಸ್ತಾನದಲ್ಲಿನ ಭಾರತದ ರಾಯಭಾರಿ ಸ್ಮಿತಾ ಪಂತ್ ಹೇಳಿದ್ದಾರೆ.

ಆಕಾಶವಾಣಿ ನ್ಯೂಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಉಜ್ಬೇಕಿಸ್ತಾನ ಭೇಟಿಯ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿನ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಕುರಿತು ಉಭಯ ರಾಷ್ಟ್ರಗಳು ಮಹತ್ವದ ಚರ್ಚೆ ನಡೆಸಲಿವೆ ಎಂದು ತಿಳಿಸಿದರು.

ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಉಜ್ಬೇಕಿಸ್ತಾನ ನಡುವಿನ ವ್ಯಾಪಾರ ವಹಿವಾಟು ಹಲವು ಪಟ್ಟು ಹೆಚ್ಚಾಗಿದೆ. ಉಭಯ ದೇಶಗಳ ನಡುವಿನ ಆರ್ಥಿಕ ಹಾಗೂ ವಾಣಿಜ್ಯ ಸಹಕಾರವನ್ನು ಇನ್ನಷ್ಟು ವಿಸ್ತರಿಸಲು ಉತ್ತಮ ಅವಕಾಶಗಳಿವೆ ಎಂದು ಸ್ಮಿತಾ ಪಂತ್ ಹೇಳಿದರು.

ಪ್ರಧಾನಿ ಮೋದಿ ಅವರ ಭೇಟಿಯ ವೇಳೆ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವುದು ಹಾಗೂ ವ್ಯಾಪಾರಕ್ಕೆ ಅಡ್ಡಿಯಾಗುತ್ತಿರುವ ತೊಡಕುಗಳನ್ನು ನಿವಾರಿಸುವುದು ಪ್ರಮುಖ ಚರ್ಚೆಯ ವಿಷಯಗಳಾಗಲಿವೆ ಎಂದು ಅವರು ತಿಳಿಸಿದರು.

ಭಾರತ ಮತ್ತು ಉಜ್ಬೇಕಿಸ್ತಾನ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಸಹಕಾರ ಹೊಂದಿದ್ದು, ಮುಂದಿನ ದಿನಗಳಲ್ಲಿ ಸಂಪರ್ಕ, ವ್ಯಾಪಾರ ಸೇರಿದಂತೆ ವಿವಿಧ ವಲಯಗಳಲ್ಲಿ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವತ್ತ ಎರಡೂ ರಾಷ್ಟ್ರಗಳು ಗಮನ ಹರಿಸಲಿವೆ ಎಂದು ರಾಯಭಾರಿ ಸ್ಮಿತಾ ಪಂತ್ ಹೇಳಿದ್ದಾರೆ.

Share This Article