ಗಲ್ಫ್‌ನಲ್ಲಿ ಉದ್ವಿಗ್ನತೆ: ಭಾರತೀಯ ನಾವಿಕರ ನಿಯೋಜನೆಗೆ ತಾತ್ಕಾಲಿಕ ತಡೆ ನೀಡಲು DGMA ಸೂಚನೆ

1 Min Read
1 Min Read

ನವದೆಹಲಿ: ಗಲ್ಫ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಭದ್ರತಾ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಸಾಗರ ಆಡಳಿತ ಮಹಾನಿರ್ದೇಶನಾಲಯ (Directorate General of Maritime Administration – DGMA) ಭಾರತೀಯ ನಾವಿಕರ ಸುರಕ್ಷತೆಗಾಗಿ ಮಹತ್ವದ ನಿರ್ದೇಶನ ಹೊರಡಿಸಿದೆ.

ಡಿಜಿಎಂಎ, ಹಡಗು ಮಾಲೀಕರು, ಹಡಗು ನಿರ್ವಹಣಾ ಸಂಸ್ಥೆಗಳು ಹಾಗೂ Recruitment and Placement Service Licence (RPSL) ಹೊಂದಿರುವ ಸಂಸ್ಥೆಗಳು ಮುಂದಿನ ಆದೇಶದವರೆಗೆ ಹೋರ್ಮುಜ್ ಜಲಸಂಧಿ (Strait of Hormuz) ಮಾರ್ಗದಲ್ಲಿ ಸಂಚರಿಸುವ ಹಡಗುಗಳಲ್ಲಿ ಭಾರತೀಯ ನಾವಿಕರನ್ನು ನಿಯೋಜಿಸದಂತೆ ಸೂಚಿಸಿದೆ.

ಗಲ್ಫ್ ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಭಾರತೀಯ ನಾವಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಈ ಮುನ್ನೆಚ್ಚರಿಕಾ ಸಲಹೆ (Advisory) ನೀಡಲಾಗಿದೆ.

ಡಿಜಿಎಂಎ ಪ್ರಕಟಣೆಯ ಪ್ರಕಾರ, ಕಳೆದ ಕೆಲವು ದಿನಗಳಿಂದ ವಾಣಿಜ್ಯ ಹಡಗುಗಳ ಮೇಲೆ ನಡೆದಿರುವ ದಾಳಿಗಳಿಂದ ಸಂಘರ್ಷಪೀಡಿತ ಸಮುದ್ರ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ನಾವಿಕರು ಮತ್ತು ವಾಣಿಜ್ಯ ಹಡಗುಗಳಿಗೆ ಅಪಾಯದ ಮಟ್ಟ ಗಮನಾರ್ಹವಾಗಿ ಹೆಚ್ಚಿದೆ.

ಭಾರತೀಯ ನಾವಿಕರ ಸುರಕ್ಷತೆ, ಕಲ್ಯಾಣ ಹಾಗೂ ಭಾರತೀಯ ಹಡಗುಗಳ ಭದ್ರತೆ ಡಿಜಿಎಂಎಗೆ ಅತ್ಯುನ್ನತ ಆದ್ಯತೆಯಾಗಿದೆ ಎಂದು ನಿರ್ದೇಶನಾಲಯ ಸ್ಪಷ್ಟಪಡಿಸಿದೆ.

ತುರ್ತು ಪರಿಸ್ಥಿತಿ ಎದುರಾದಲ್ಲಿ, ಭಾರತೀಯ ನಾವಿಕರು ಮತ್ತು ಹಡಗುಗಳು ತಕ್ಷಣವೇ DG Communication Centre ಅಥವಾ ಭಾರತೀಯ ನೌಕಾಪಡೆಯ Information Fusion Centre – Indian Ocean Region (IFC-IOR) ಅನ್ನು ಸಂಪರ್ಕಿಸುವಂತೆ ಡಿಜಿಎಂಎ ಸೂಚಿಸಿದೆ.

Share This Article