ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA), NEET-UG 2026 ಮರುಪರೀಕ್ಷೆ ಬರೆದ ಅಭ್ಯರ್ಥಿಗಳಿಗಾಗಿ OMR ಉತ್ತರಪತ್ರಿಕೆ (Answer Sheet) ಹಾಗೂ ಸ್ಕ್ಯಾನ್ ಮಾಡಲಾದ ಪ್ರತಿಕ್ರಿಯೆಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ನಲ್ಲಿ ತಮ್ಮ ಅರ್ಜಿ ಸಂಖ್ಯೆ (Application Number) ಬಳಸಿ ಲಾಗಿನ್ ಆಗಿ, ತಾವು ಗುರುತಿಸಿದ ಉತ್ತರಗಳು ಮತ್ತು ಸ್ಕ್ಯಾನರ್ ದಾಖಲಿಸಿರುವ ಉತ್ತರಗಳನ್ನು ಪರಿಶೀಲಿಸಬಹುದು.
ಯಾವುದೇ ಪ್ರಶ್ನೆಯಲ್ಲಿ ವ್ಯತ್ಯಾಸ ಕಂಡುಬಂದರೆ, ಸಂಬಂಧಿತ ಪ್ರಶ್ನೆಯನ್ನು ಆಯ್ಕೆ ಮಾಡಿ ತಾವು ಸರಿಯೆಂದು ಹೇಳುವ ಉತ್ತರವನ್ನು ನಮೂದಿಸಿ OMR ಚಾಲೆಂಜ್ ಸಲ್ಲಿಸಬಹುದು. ಇದಕ್ಕಾಗಿ ಪ್ರತಿ ಪ್ರಶ್ನೆಗೆ ₹200 ಪ್ರಕ್ರಿಯಾ ಶುಲ್ಕ ಪಾವತಿಸಬೇಕಾಗುತ್ತದೆ.
ಆದರೆ, ಅಭ್ಯರ್ಥಿಯ ಆಕ್ಷೇಪಣೆ ಪರಿಶೀಲನೆ ಬಳಿಕ ಸಮ್ಮತವಾದರೆ ಪಾವತಿಸಿದ ಶುಲ್ಕವನ್ನು ಮರುಪಾವತಿಸಲಾಗುವುದು ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.
OMR ಚಾಲೆಂಜ್ ಸಲ್ಲಿಸಲು ಜುಲೈ 15ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು 011-40759000, 011-69227700 ಸಹಾಯವಾಣಿ ಸಂಖ್ಯೆಗಳ ಸಂಪರ್ಕಿಸಬಹುದು ಅಥವಾ neetug2026@nta.ac.in ಇ-ಮೇಲ್ ಮೂಲಕ ಎನ್‌ಟಿಎಗೆ ಸಂಪರ್ಕಿಸಬಹುದು.


