ಆಮೀರ್ ಖಾನ್ ವೈಯಕ್ತಿಕ ಜೀವನದ ಬಗ್ಗೆ ಬಿಜೆಪಿ ನಾಯಕಿ ನಾಜಿಯಾ ಇಲಾಹಿ ಖಾನ್ ವಿವಾದಾತ್ಮಕ ಹೇಳಿಕೆ

1 Min Read
1 Min Read

ನವದೆಹಲಿ: ಬಾಲಿವುಡ್ ನಟ ಆಮೀರ್ ಖಾನ್ ಹಾಗೂ ಗೌರಿ ಸ್ಪ್ರಾಟ್ ಅವರ ಸಂಬಂಧ ಮತ್ತು ವಿವಾಹದ ಕುರಿತ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮುಂದುವರಿದಿರುವ ಬೆನ್ನಲ್ಲೇ, ಬಿಜೆಪಿ ನಾಯಕಿ ನಾಜಿಯಾ ಇಲಾಹಿ ಖಾನ್ ನೀಡಿರುವ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಮಾತನಾಡಿರುವ ನಾಜಿಯಾ ಇಲಾಹಿ ಖಾನ್, ಆಮೀರ್ ಖಾನ್ ಅವರ ಹಿಂದಿನ ವಿವಾಹಗಳು ಮತ್ತು ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಆಮೀರ್ ಖಾನ್ ಅವರ ಮೊದಲ, ಎರಡನೇ ಹಾಗೂ ಈಗಿನ ಸಂಗಾತಿಯೂ ಹಿಂದೂ ಸಮುದಾಯದವರೇ ಆಗಿರುವುದನ್ನು ಉಲ್ಲೇಖಿಸಿದ ಅವರು, “ಮೂರು ಬಾರಿ ಹಿಂದೂ ಮಹಿಳೆಯರನ್ನೇ ಜೀವನ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಿದ್ದರೆ ಹಿಂದೂ ಧರ್ಮಕ್ಕೆ ಮತಾಂತರವಾಗಿಲ್ಲ ಏಕೆ?” ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ, ಆಮೀರ್ ಖಾನ್ ಅವರು ಹಿಂದೂ ಮಹಿಳೆಯರನ್ನು ಮದುವೆಯಾಗಿ ನಂತರ ವಿಚ್ಛೇದನ ನೀಡಿರುವ ವಿಚಾರವನ್ನೂ ಉಲ್ಲೇಖಿಸಿ, ಇದು ಉದ್ದೇಶಪೂರ್ವಕವಾಗಿಯೇ ನಡೆಯುತ್ತಿದೆ ಎಂಬ ಆರೋಪವನ್ನೂ ಮಾಡಿದ್ದಾರೆ. ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.

ಆದರೆ, ನಾಜಿಯಾ ಇಲಾಹಿ ಖಾನ್ ಅವರ ಈ ಆರೋಪಗಳಿಗೆ ಆಮೀರ್ ಖಾನ್ ಅಥವಾ ಅವರ ತಂಡದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನೂ ಪ್ರಕಟವಾಗಿಲ್ಲ. ಅಲ್ಲದೆ, ಅವರ ಆರೋಪಗಳಿಗೆ ಸಾರ್ವಜನಿಕವಾಗಿ ದೃಢಪಡಿಸಿರುವ ಯಾವುದೇ ಸಾಕ್ಷ್ಯವೂ ಲಭ್ಯವಾಗಿಲ್ಲ.

ಈ ನಡುವೆ, ನಟನ ವೈಯಕ್ತಿಕ ಜೀವನದ ಕುರಿತು ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿವೆ.

Share This Article