ಪಶ್ಚಿಮ ಏಷ್ಯಾ ಕದನ ವಿರಾಮದ ಬಳಿಕ ಕೇಂದ್ರದ ಮಹತ್ವದ ನಿರ್ಧಾರ; ಅನಿಲ ಪೂರೈಕೆ ಮೇಲಿನ ನಿರ್ಬಂಧ ತೆರವು

1 Min Read
1 Min Read

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಕದನ ವಿರಾಮ ಜಾರಿಯಾದ ಬಳಿಕ ಹೋರ್ಮುಜ್ ಜಲಸಂಧಿ (Strait of Hormuz) ಮೂಲಕ ದ್ರವೀಕೃತ ನೈಸರ್ಗಿಕ ಅನಿಲ (LNG) ಸಾಗಣೆ ಪುನರಾರಂಭವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೈಸರ್ಗಿಕ ಅನಿಲ ಪೂರೈಕೆಯ ಮೇಲಿನ ತುರ್ತು ನಿರ್ಬಂಧಗಳನ್ನು ಹಿಂಪಡೆದಿದೆ.

ಈ ಕುರಿತು ಅಧಿಸೂಚನೆ ಹೊರಡಿಸಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ನೈಸರ್ಗಿಕ ಅನಿಲ (ಪೂರೈಕೆ ನಿಯಂತ್ರಣ) ಆದೇಶ–2026ಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಿದೆ.

ತಿದ್ದುಪಡಿಯೊಂದಿಗೆ, ದೇಶೀಯವಾಗಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲ ಹಾಗೂ ಆಮದು ಮಾಡಿಕೊಳ್ಳುವ LNG ಹಂಚಿಕೆಗೆ ಸರ್ಕಾರಕ್ಕೆ ನೀಡಲಾಗಿದ್ದ ತುರ್ತು ಆದ್ಯತಾ ಅಧಿಕಾರಗಳನ್ನು ಹಿಂಪಡೆಯಲಾಗಿದೆ.

ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಹೋರ್ಮುಜ್ ಜಲಸಂಧಿಯಲ್ಲಿ LNG ಸಾಗಣೆಗೆ ಅಡ್ಡಿಯಾಗಿದ್ದ ಹಿನ್ನೆಲೆಯಲ್ಲಿ, ಅಗತ್ಯ ವಸ್ತುಗಳ ಕಾಯ್ದೆ (Essential Commodities Act) ಅಡಿಯಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರ ತುರ್ತು ನಿಯಂತ್ರಣ ಆದೇಶ ಹೊರಡಿಸಿತ್ತು.

ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿರುವುದರಿಂದ ತುರ್ತು ನಿಯಮಗಳನ್ನು ಹಿಂಪಡೆದು, ನೈಸರ್ಗಿಕ ಅನಿಲ ಪೂರೈಕೆ ವ್ಯವಸ್ಥೆಯನ್ನು ಸಾಮಾನ್ಯ ಕ್ರಮದಲ್ಲಿ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ.

Share This Article
Leave a Comment