250ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಅಮೆರಿಕ; ದೇಶಾದ್ಯಂತ ಭರ್ಜರಿ ಆಚರಣೆ

1 Min Read
1 Min Read

ವಾಷಿಂಗ್ಟನ್ ಡಿ.ಸಿ.: ಅಮೆರಿಕ ಸಂಯುಕ್ತ ಸಂಸ್ಥಾನ (United States) ಇಂದು ತನ್ನ 250ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದೆ.

1776ರ ಜುಲೈ 4ರಂದು, ಅಮೆರಿಕದ 13 ವಸಾಹತುಗಳು ಬ್ರಿಟಿಷರ ಆಡಳಿತದಿಂದ ಸ್ವಾತಂತ್ರ್ಯ ಘೋಷಿಸಿದ ‘ಸ್ವಾತಂತ್ರ್ಯ ಘೋಷಣಾಪತ್ರ’ (Declaration of Independence) ಗೆ ಸಂಸ್ಥಾಪಕ ನಾಯಕರು ಸಹಿ ಹಾಕಿದ ದಿನದ ಸ್ಮರಣಾರ್ಥ ಈ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತದೆ.

‘ಸೆಮಿಕ್ವಿನ್‌ಸೆಂಟೆನಿಯಲ್’ (Semiquincentennial) ಅಥವಾ ‘ಅಮೆರಿಕಾ 250’ ಎಂದು ಕರೆಯಲಾಗುತ್ತಿರುವ ಈ ಐತಿಹಾಸಿಕ ವರ್ಷಾಚರಣೆಯ ಅಂಗವಾಗಿ ದೇಶದಾದ್ಯಂತ ವೈಭವದ ಮೆರವಣಿಗೆಗಳು, ಸೇನಾ ವಿಮಾನಗಳ ಪ್ರದರ್ಶನ, ಸಂಗೀತ ಕಾರ್ಯಕ್ರಮಗಳು, ಐತಿಹಾಸಿಕ ಘಟನೆಗಳ ಮರುನಿರೂಪಣೆ ಹಾಗೂ ಅದ್ಧೂರಿ ಪಟಾಕಿ ಪ್ರದರ್ಶನಗಳು ಆಯೋಜಿಸಲಾಗಿದೆ.

ವಿಶೇಷವಾಗಿ ವಾಷಿಂಗ್ಟನ್ ಡಿ.ಸಿ. ಹಾಗೂ ಫಿಲಡೆಲ್ಫಿಯಾ ನಗರಗಳಲ್ಲಿ ಪ್ರಮುಖ ಕಾರ್ಯಕ್ರಮಗಳು ನಡೆಯುತ್ತಿದ್ದು, ಸ್ವಾತಂತ್ರ್ಯ ಘೋಷಣಾಪತ್ರ ಅಂಗೀಕರಿಸಲ್ಪಟ್ಟ ಐತಿಹಾಸಿಕ ಕ್ಷಣವನ್ನು ಸ್ಮರಿಸಲಾಗುತ್ತಿದೆ.

ಅಮೆರಿಕದಲ್ಲಿ ಸ್ವಾತಂತ್ರ್ಯ ದಿನವನ್ನು ಫೆಡರಲ್ ರಜಾದಿನವಾಗಿ ಆಚರಿಸಲಾಗುತ್ತದೆ. ಈ ದಿನದ ಪ್ರಮುಖ ಆಕರ್ಷಣೆಯಾಗಿರುವ ಪಟಾಕಿ ಪ್ರದರ್ಶನಗಳು ಸಾವಿರಾರು ಜನರನ್ನು ಸೆಳೆಯಲಿದ್ದು, ಸಣ್ಣ ಪಟ್ಟಣಗಳಲ್ಲಿಯೂ ವಿವಿಧ ಸಾಂಸ್ಕೃತಿಕ ಮತ್ತು ಸಾರ್ವಜನಿಕ ಕಾರ್ಯಕ್ರಮಗಳು ನಡೆಯಲಿವೆ.

ಇದೇ ಸಂದರ್ಭದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 11 ಮಂದಿಗೆ ಕ್ಷಮಾದಾನ (Pardon) ಘೋಷಿಸಿದ್ದಾರೆ. ಇವರಲ್ಲಿ ವಾಷಿಂಗ್ಟನ್‌ನ ಲಾಬಿಯಿಸ್ಟ್ ಜಾಕ್ ಅಬ್ರಾಮೋಫ್ ಅವರ ಮಾಜಿ ವ್ಯವಹಾರ ಪಾಲುದಾರರೊಬ್ಬರು ಹಾಗೂ ವಾಹನಗಳ ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಒಂಬತ್ತು ಮಂದಿ ಸೇರಿದ್ದಾರೆ.

Share This Article