ದೆಹಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ವೇಗ; 1 ಲಕ್ಷಕ್ಕೂ ಅಧಿಕ ಗಣತಿ ನಮೂನೆಗಳ ಡಿಜಿಟಲೀಕರಣ

1 Min Read
1 Min Read

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಅಭಿಯಾನದಡಿ ಇದುವರೆಗೆ 1,02,000ಕ್ಕೂ ಹೆಚ್ಚು ಗಣತಿ ನಮೂನೆಗಳನ್ನು (Enumeration Forms) ಯಶಸ್ವಿಯಾಗಿ ಡಿಜಿಟಲೀಕರಿಸಲಾಗಿದೆ.

ದೆಹಲಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ನೀಡಿರುವ ಮಾಹಿತಿಯ ಪ್ರಕಾರ, ಈ ವಿಶೇಷ ಅಭಿಯಾನದಡಿ ಈಗಾಗಲೇ 33.14 ಲಕ್ಷಕ್ಕೂ ಹೆಚ್ಚು ಗಣತಿ ನಮೂನೆಗಳನ್ನು ಮತದಾರರಿಗೆ ವಿತರಿಸಲಾಗಿದೆ.

ಪ್ರಸ್ತುತ, ಮತದಾರರ ಪಟ್ಟಿ ಪರಿಶೀಲನೆ ಮತ್ತು ನವೀಕರಣಕ್ಕಾಗಿ ಮನೆ ಮನೆಗೆ ತೆರಳಿ ನಮೂನೆಗಳನ್ನು ವಿತರಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಈ ಅಭಿಯಾನದ ಭಾಗವಾಗಿ 13,000ಕ್ಕೂ ಹೆಚ್ಚು ಬೂತ್ ಮಟ್ಟದ ಅಧಿಕಾರಿಗಳು (BLOಗಳು) ಈ ತಿಂಗಳ 29ರವರೆಗೆ ಪ್ರತಿಯೊಂದು ಮನೆಗೂ ಭೇಟಿ ನೀಡಿ, ಈಗಿರುವ ಮತದಾರರಿಗೆ ಎರಡು ಪ್ರತಿಗಳಲ್ಲಿ ಪೂರ್ವಮುದ್ರಿತ ಗಣತಿ ನಮೂನೆಗಳನ್ನು ವಿತರಿಸಲಿದ್ದಾರೆ. ಇದರ ಮೂಲಕ ಮತದಾರರ ಮಾಹಿತಿಯನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿ ಮತ್ತು ನವೀಕರಣ ಕೈಗೊಳ್ಳಲಾಗುತ್ತದೆ.

ಮತದಾರರ ಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆಗಳು ಹಾಗೂ ಹಕ್ಕು ದಾವೆಗಳನ್ನು ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಸಲ್ಲಿಸಬಹುದು.

ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 7ರಂದು ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.

ಮತದಾರರು ತಮ್ಮ ಗಣತಿ ನಮೂನೆಯನ್ನು www.voters.eci.gov.in ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕವೂ ಭರ್ತಿ ಮಾಡಬಹುದು.

Share This Article
Leave a Comment