ಡಾ. ಸೋನೆಲಾಲ್ ಪಟೇಲ್ ಜನ್ಮದಿನ: ಅಮಿತ್ ಶಾ ಗೌರವ ನಮನ
ಡಾ. ಸೋನೆಲಾಲ್ ಪಟೇಲ್ ಅವರ ಜನ್ಮದಿನದ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗೌರವ ನಮನ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಅಮಿತ್ ಶಾ, ಡಾ. ಸೋನೆಲಾಲ್ ಪಟೇಲ್ ಅವರು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದು, ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ಹೋರಾಟದ ಪ್ರಬಲ ಸಂದೇಶವನ್ನು ಸಮಾಜಕ್ಕೆ ನೀಡಿದ ಮಹನೀಯರು ಎಂದು ಬಣ್ಣಿಸಿದ್ದಾರೆ.
ಬಡವರು, ಹಿಂದುಳಿದವರು ಹಾಗೂ ವಂಚಿತ ವರ್ಗದ ಜನರ ಅಭಿವೃದ್ಧಿ, ಸಾಮಾಜಿಕ ಸಾಮರಸ್ಯ ಮತ್ತು ಜನಸೇವೆಗೆ ಡಾ. ಸೋನೆಲಾಲ್ ಪಟೇಲ್ ತಮ್ಮ ಸಂಪೂರ್ಣ ಜೀವನವನ್ನು ಸಮರ್ಪಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ವಂಚಿತರಿಗೆ ನ್ಯಾಯ ಮತ್ತು ಗೌರವಯುತ ಬದುಕು ದೊರಕಬೇಕು ಎಂಬ ಅವರ ಚಿಂತನೆ ಹಾಗೂ ಸಂಕಲ್ಪವು ಮುಂದಿನ ಪೀಳಿಗೆಗಳಿಗೂ ಸದಾ ಪ್ರೇರಣೆಯಾಗಿರಲಿದೆ ಎಂದು ಅಮಿತ್ ಶಾ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.


