ಜಾರ್ಖಂಡ್ : ಜಾರ್ಖಂಡ್ ರಾಜ್ಯ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರಾಗಿ ನೇಮಕಗೊಂಡಿರುವ ಅನುಜ್ ಕುಮಾರ್ ಸಿನ್ಹಾ, ತನೂಜ್ ಖತ್ರಿ, ಅಮೂಲ್ಯ ನೀರಜ್ ಖಾಲ್ಖೋ ಹಾಗೂ ಶಿವಪೂಜನ ಪಾಠಕ್ ಅವರಿಗೆ ಜಾರ್ಖಂಡ್ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಇಂದು ಪ್ರಮಾಣವಚನ ಬೋಧಿಸಿದರು.
ರಾಂಚಿಯ ಲೋಕ್ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರು ನೂತನ ಮಾಹಿತಿ ಆಯುಕ್ತರಿಗೆ ಹುದ್ದೆ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್, ರಾಜ್ಯ ಸಚಿವೆ ಶಿಲ್ಪಿ ನೇಹಾ ತಿರ್ಕಿ, ರಾಜ್ಯಸಭಾ ಸದಸ್ಯೆ ಮಹುವಾ ಮಾಜೀ ಸೇರಿದಂತೆ ಹಿರಿಯ ಆಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ನೂತನ ಮಾಹಿತಿ ಆಯುಕ್ತರ ನೇಮಕದಿಂದ ರಾಜ್ಯ ಮಾಹಿತಿ ಆಯೋಗದ ಕಾರ್ಯನಿರ್ವಹಣೆಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.


