ಗೇರ್ ಭಾಗಗಳಲ್ಲಿ ಅಡಗಿಸಿದ್ದ 15 ಕೆಜಿ ಚಿನ್ನ ಪತ್ತೆ; ಅಂತರರಾಷ್ಟ್ರೀಯ ಕಳ್ಳಸಾಗಣೆ ಜಾಲ ಬಯಲು

1 Min Read
1 Min Read

ದೆಹಲಿನಲ್ಲಿ ಬೃಹತ್ ಚಿನ್ನ ಕಳ್ಳಸಾಗಣೆ ಜಾಲ ಭೇದಿಸಿದ DRI; ₹21.40 ಕೋಟಿ ಮೌಲ್ಯದ 15 ಕೆಜಿ ಚಿನ್ನ ವಶ

ರಾಜಧಾನಿ ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂತರರಾಷ್ಟ್ರೀಯ ಚಿನ್ನ ಕಳ್ಳಸಾಗಣೆ ಜಾಲವನ್ನು ರಾಜಸ್ವ ಗುಪ್ತಚರ ನಿರ್ದೇಶನಾಲಯ (DRI) ಭೇದಿಸಿದ್ದು, ಸುಮಾರು ₹21.40 ಕೋಟಿ ಮೌಲ್ಯದ 15 ಕೆಜಿ ವಿದೇಶಿ ಮೂಲದ ಕಳ್ಳಸಾಗಣೆ ಚಿನ್ನವನ್ನು ವಶಪಡಿಸಿಕೊಂಡಿದೆ.

ಡಿಆರ್‌ಐ ಅಧಿಕಾರಿಗಳು ಥಾಯ್ಲೆಂಡ್‌ನಿಂದ ದೆಹಲಿಯ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್‌ಗೆ ಬಂದಿದ್ದ ಪಾರ್ಸೆಲ್‌ನ್ನು ತಡೆದು ಪರಿಶೀಲನೆ ನಡೆಸಿದರು. ಬಳಸಿದ ಗೇರ್ (Worn Gear) ಎಂದು ಘೋಷಿಸಲಾಗಿದ್ದ ಈ ಪಾರ್ಸೆಲ್‌ ವಿದೇಶಿ ಪ್ರಜೆಯೊಬ್ಬರಿಗೆ ಸಂಬಂಧಿಸಿದ ಸಂಸ್ಥೆಯ ಹೆಸರಿನಲ್ಲಿ ಕಳುಹಿಸಲಾಗಿತ್ತು.

ಸೂಕ್ಷ್ಮ ಪರಿಶೀಲನೆ ವೇಳೆ ಗೇರ್‌ ಭಾಗಗಳೊಳಗೆ ಅತ್ಯಂತ ಚಾಣಾಕ್ಷತನದಿಂದ ಅಡಗಿಸಿಟ್ಟಿದ್ದ ತಲಾ 1.5 ಕೆಜಿ ತೂಕದ ಎಂಟು ಚಿನ್ನದ ಡಿಸ್ಕ್‌ಗಳು ಪತ್ತೆಯಾಗಿವೆ.

ಇದೇ ವೇಳೆ, ಉದ್ದೇಶಿತ ಸ್ವೀಕರಿಸುವವರ ನಿವಾಸ ಹಾಗೂ ಈ ಜಾಲದ ಪ್ರಮುಖ ಆರೋಪಿಯ ಮನೆಯಲ್ಲಿ ಏಕಕಾಲದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ತಲಾ 1.5 ಕೆಜಿ ತೂಕದ ಇನ್ನೆರಡು ಚಿನ್ನದ ಡಿಸ್ಕ್‌ಗಳು, ಒಟ್ಟು 3 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಲದ ಪ್ರಮುಖ ಸೂತ್ರಧಾರ, ಈ ಹಿಂದೆ ಇದೇ ರೀತಿಯ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಹಾಗೂ ವಿದೇಶಿ ಪ್ರಜೆ ಸೇರಿ ನಾಲ್ವರನ್ನು ಬಂಧಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಕಳ್ಳಸಾಗಣೆ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ಗಡಿಯಾಚೆ ಹಣ ವರ್ಗಾವಣೆಗೆ ಕ್ರಿಪ್ಟೋಕರೆನ್ಸಿಯನ್ನು ಬಳಸಲಾಗುತ್ತಿತ್ತು ಎಂಬ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಪ್ರಕರಣದ ಕುರಿತು ಡಿಆರ್‌ಐ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment