ಯುಎಸ್ ಓಪನ್ ಬ್ಯಾಡ್ಮಿಂಟನ್: ಫೈನಲ್‌ಗೆ ಕಿಡಾಂಬಿ ಶ್ರೀಕಾಂತ್ ಭರ್ಜರಿ ಎಂಟ್ರಿ

1 Min Read
1 Min Read

ಯುಎಸ್ ಓಪನ್ ಬ್ಯಾಡ್ಮಿಂಟನ್: ಫೈನಲ್‌ಗೆ ಕಿಡಾಂಬಿ ಶ್ರೀಕಾಂತ್ ಭರ್ಜರಿ ಎಂಟ್ರಿ

ಭಾರತದ ಅನುಭವಿ ಶಟ್ಲರ್ ಕಿಡಾಂಬಿ ಶ್ರೀಕಾಂತ್ ಅಮೆರಿಕದ ಕ್ಯಾಲಿಫೋರ್ನಿಯಾದ ಟೈಟನ್ ಜಿಮ್‌ನಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ಗೆ ಭರ್ಜರಿಯಾಗಿ ಪ್ರವೇಶಿಸಿದ್ದಾರೆ.

ಸೆಮಿಫೈನಲ್‌ನಲ್ಲಿ ಜಪಾನ್‌ನ ಯುದೈ ಒಕಿಮೊಟೊ ವಿರುದ್ಧ ನಡೆದ ರೋಚಕ ಹಣಾಹಣಿಯಲ್ಲಿ ಶ್ರೀಕಾಂತ್ 22-20, 15-21, 21-19 ಅಂತರದಿಂದ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟರು. ಫೈನಲ್‌ನಲ್ಲಿ ಅವರು ಚೈನೀಸ್ ತೈಪೆಯ ಸು ಲಿ ಯಾಂಗ್ ಅವರನ್ನು ಎದುರಿಸಲಿದ್ದಾರೆ.

ಇದಕ್ಕೂ ಮುನ್ನ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಶ್ರೀಕಾಂತ್, ಚೈನೀಸ್ ತೈಪೆಯ ಲಿಯಾವೊ ಝುವೋ-ಫು ವಿರುದ್ಧ 21-9, 12-21, 21-8 ಅಂತರದಿಂದ ಜಯಗಳಿಸಿ ಸೆಮಿಫೈನಲ್ ಪ್ರವೇಶಿಸಿದ್ದರು.

ಇನ್ನೊಂದೆಡೆ, ಭಾರತದ ರೌನಕ್ ಚೌಹಾಣ್ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಚೈನೀಸ್ ತೈಪೆಯ ಸು ಲಿ ಯಾಂಗ್ ವಿರುದ್ಧ 17-21, 19-21 ಅಂತರದಿಂದ ಸೋತು ಟೂರ್ನಿಯಿಂದ ಹೊರಬಿದ್ದರು.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ದೇವಿಕಾ ಸಿಹಾಗ್ ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್‌ನ ಲೈನ್ ಕ್ರಿಸ್ಟೋಫರ್ಸನ್ ವಿರುದ್ಧ 16-21, 21-11, 11-21 ಅಂತರದಿಂದ ಸೋಲು ಅನುಭವಿಸಿ ಟೂರ್ನಿಗೆ ವಿದಾಯ ಹೇಳಿದರು.

Share This Article