ಫಿಫಾ ವಿಶ್ವಕಪ್: ಜಪಾನ್‌ಗೆ ಸೋಲುಣಿಸಿ ಬ್ರೆಜಿಲ್ ಪ್ರೀಕ್ವಾರ್ಟರ್‌ಗೆ; ಪೆನಾಲ್ಟಿ ಶೂಟೌಟ್‌ನಲ್ಲಿ ಜರ್ಮನಿಗೆ ಪರಾಗ್ವೆ ಶಾಕ್

1 Min Read
1 Min Read

ಫಿಫಾ ವಿಶ್ವಕಪ್: ಜಪಾನ್‌ಗೆ ಸೋಲುಣಿಸಿ ಬ್ರೆಜಿಲ್ ಪ್ರೀಕ್ವಾರ್ಟರ್‌ಗೆ; ಪೆನಾಲ್ಟಿ ಶೂಟೌಟ್‌ನಲ್ಲಿ ಜರ್ಮನಿಗೆ ಪರಾಗ್ವೆ ಶಾಕ್

ಫಿಫಾ ವಿಶ್ವಕಪ್‌ನಲ್ಲಿ ಐದು ಬಾರಿಯ ಚಾಂಪಿಯನ್ ಬ್ರೆಜಿಲ್, ಜಪಾನ್ ವಿರುದ್ಧ 2-1 ಗೋಲುಗಳ ರೋಚಕ ಜಯ ಸಾಧಿಸಿ ರೌಂಡ್ ಆಫ್ 16 (ಪ್ರೀಕ್ವಾರ್ಟರ್) ಪ್ರವೇಶಿಸಿದೆ. ಅಮೆರಿಕದ ಹ್ಯೂಸ್ಟನ್‌ನಲ್ಲಿ ನಡೆದ ರೌಂಡ್ ಆಫ್ 32 ಪಂದ್ಯದಲ್ಲಿ ಹೆಚ್ಚುವರಿ ಸಮಯದ ಕೊನೆಯ ಕ್ಷಣದಲ್ಲಿ ಗೇಬ್ರಿಯಲ್ ಮಾರ್ಟಿನೆಲ್ಲಿ ಬಾರಿಸಿದ ಗೋಲು ಬ್ರೆಜಿಲ್‌ಗೆ ಗೆಲುವು ತಂದುಕೊಟ್ಟಿತು.

ದ್ವಿತೀಯಾರ್ಧದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದ ಮಾರ್ಟಿನೆಲ್ಲಿ, ಹೆಚ್ಚುವರಿ ಸಮಯದ ಆರನೇ ನಿಮಿಷದಲ್ಲಿ ನಿರ್ಣಾಯಕ ಗೋಲು ದಾಖಲಿಸಿ ಪಂದ್ಯವನ್ನು ಬ್ರೆಜಿಲ್ ಪರ ತಿರುಗಿಸಿದರು. ಈ ಗೆಲುವಿನೊಂದಿಗೆ ಬ್ರೆಜಿಲ್ ಪ್ರೀಕ್ವಾರ್ಟರ್‌ನಲ್ಲಿ ಐವರಿ ಕೋಸ್ಟ್ ಅಥವಾ ನಾರ್ವೆ ತಂಡವನ್ನು ಎದುರಿಸಲಿದೆ.

ಇನ್ನೊಂದು ರೌಂಡ್ ಆಫ್ 32 ಪಂದ್ಯದಲ್ಲಿ ಪರಾಗ್ವೆ, ಜರ್ಮನಿಯನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-3 ಗೋಲುಗಳಿಂದ ಮಣಿಸಿ ಪ್ರೀಕ್ವಾರ್ಟರ್‌ಗೆ ಲಗ್ಗೆ ಇಟ್ಟಿತು. ನಿಗದಿತ ಹಾಗೂ ಹೆಚ್ಚುವರಿ ಸಮಯದ ಅಂತ್ಯಕ್ಕೆ ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದರಿಂದ ಫಲಿತಾಂಶ ಪೆನಾಲ್ಟಿ ಶೂಟೌಟ್‌ಗೆ ತಲುಪಿತು.

ಪರಾಗ್ವೆಯ ಜೋಸೆ ಕನಾಲೆ ಸಡನ್ ಡೆತ್‌ನಲ್ಲಿ ನಿರ್ಣಾಯಕ ಗೋಲು ಬಾರಿಸಿದರೆ, ಗೋಲ್‌ಕೀಪರ್ ಒರ್ಲ್ಯಾಂಡೊ ಗಿಲ್ ಎರಡು ಅಮೋಘ ಸೇವ್‌ಗಳ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಪರಾಗ್ವೆ ಪರ ಜೂಲಿಯೊ ಎನ್ಸಿಸೊ ಮೊದಲಾರ್ಧದ ಅಂತ್ಯದ ವೇಳೆಗೆ ಗೋಲು ಗಳಿಸಿದ್ದರೆ, ಜರ್ಮನಿ ಪರ ಕೈ ಹಾವರ್ಟ್ಸ್ 52ನೇ ನಿಮಿಷದಲ್ಲಿ ಸಮಬಲ ಸಾಧಿಸಿದರು.

ಈ ಸೋಲಿನೊಂದಿಗೆ ವಿಶ್ವಕಪ್ ಇತಿಹಾಸದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಜರ್ಮನಿಗೆ ಇದು ಮೊದಲ ಸೋಲು ಎಂಬ ದಾಖಲೆಯೂ ನಿರ್ಮಾಣವಾಗಿದೆ.

Share This Article