ಚೆನ್ನೈ ಬಂದರಿನಲ್ಲಿ ಡಿಆರ್‌ಐ ಬಿಗ್ ಆಪರೇಷನ್: ಚೀನಾ ಪಟಾಕಿ ಕಳ್ಳಸಾಗಣೆ ಜಾಲ ಭೇದ, ಸಾವಿರಾರು ಪಟಾಕಿ ವಶ
ಭಾರತಕ್ಕೆ ಅಕ್ರಮವಾಗಿ ಚೀನಾ ಮೂಲದ ಪಟಾಕಿಗಳು ಮತ್ತು ಸಿಡಿಮದ್ದುಗಳನ್ನು ಕಳ್ಳಸಾಗಣೆ ಮಾಡಲು ನಡೆದ ಎರಡು ಪ್ರತ್ಯೇಕ ಪ್ರಯತ್ನಗಳನ್ನು ರಾಜಸ್ವ ಗುಪ್ತಚರ ನಿರ್ದೇಶನಾಲಯ (DRI) ಯಶಸ್ವಿಯಾಗಿ ವಿಫಲಗೊಳಿಸಿದೆ. ಈ ಕಾರ್ಯಾಚರಣೆಗಳು ಚೆನ್ನೈ ಬಂದರಿನಲ್ಲಿ ನಡೆದಿವೆ.
ಹಣಕಾಸು ಸಚಿವಾಲಯದ ಮಾಹಿತಿ ಪ್ರಕಾರ, ಡಿಆರ್‌ಐ ಅಧಿಕಾರಿಗಳು ಚೀನಾದಿಂದ ಬಂದಿದ್ದ ಎರಡು 40 ಅಡಿ ಉದ್ದದ ಕಂಟೇನರ್‌ಗಳನ್ನು ತಡೆದು ಪರಿಶೀಲಿಸಿದರು. ದಾಖಲೆಗಳಲ್ಲಿ ಈ ಕಂಟೇನರ್‌ಗಳಲ್ಲಿ ಟ್ರಾಲಿ ಬ್ಯಾಗ್‌ಗಳು ಮತ್ತು ಸ್ಪ್ರೇಯರ್‌ಗಳಿವೆ ಎಂದು ಘೋಷಿಸಲಾಗಿದ್ದರೂ, ಸವಿಸ್ತಾರ ತಪಾಸಣೆಯಲ್ಲಿ ಸುಮಾರು 46 ಸಾವಿರ ಚೀನಾ ಮೂಲದ ಪಟಾಕಿಗಳು ಮತ್ತು ಸಿಡಿಮದ್ದುಗಳು ಇತರ ಸರಕುಗಳ ಹಿಂದೆ ಜಾಣ್ಮೆಯಿಂದ ಅಡಗಿಸಿಡಲಾಗಿರುವುದು ಪತ್ತೆಯಾಯಿತು.
ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ, ಡಿಆರ್‌ಐ ನೀಡಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಚೆನ್ನೈ ಕಸ್ಟಮ್ಸ್ ಅಧಿಕಾರಿಗಳು, 18.7 ಮೆಟ್ರಿಕ್ ಟನ್ ಚೀನಾ ಮೂಲದ ಪಟಾಕಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಕಳ್ಳಸಾಗಣೆ ಜಾಲವನ್ನು ಪತ್ತೆಹಚ್ಚಿದ್ದಾರೆ.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದ್ದು, ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.


