ಝಾರ್ಖಂಡ್ ರಾಜ್ಯಸಭೆ ಚುನಾವಣೆ: ಮತದಾನ ಆರಂಭ, ರಾಜಕೀಯ ಲೆಕ್ಕಾಚಾರ ತೀವ್ರ

1 Min Read
1 Min Read

ಝಾರ್ಖಂಡ್‌ : ಝಾರ್ಖಂಡ್‌ನ ಎರಡು ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಇಂದು ಮತದಾನ ಪ್ರಕ್ರಿಯೆ ಆರಂಭವಾಗಿದೆ. ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಅಭ್ಯರ್ಥಿ ಬೈದ್ಯನಾಥ್ ರಾಮ್, ಕಾಂಗ್ರೆಸ್ ಅಭ್ಯರ್ಥಿ ಪ್ರಣವ್ ಝಾ ಹಾಗೂ ಸ್ವತಂತ್ರ ಅಭ್ಯರ್ಥಿ ಪರಿಮಲ್ ನಾಥ್ವಾನಿ ಕಣದಲ್ಲಿದ್ದಾರೆ.

ರಾಜ್ಯ ವಿಧಾನಸಭಾ ಸಂಕೀರ್ಣದಲ್ಲಿ ಬೆಳಗ್ಗೆ 9 ಗಂಟೆಗೆ ಆರಂಭವಾದ ಮತದಾನ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಬಳಿಕ ಸಂಜೆ 5 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗಲಿದ್ದು, ಫಲಿತಾಂಶ ಪ್ರಕಟವಾಗಲಿದೆ.

ಒಟ್ಟು 81 ಶಾಸಕರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ. ಪ್ರಸ್ತುತ ಆಡಳಿತಾರೂಢ ಮೈತ್ರಿಕೂಟಕ್ಕೆ ಜೆಎಂಎಂ, ಕಾಂಗ್ರೆಸ್, ಆರ್‌ಜೆಡಿ ಹಾಗೂ ಸಿಪಿಐ(ಎಂಎಲ್) ಸೇರಿದಂತೆ 56 ಶಾಸಕರ ಬೆಂಬಲವಿದೆ. ಮತ್ತೊಂದೆಡೆ, 24 ಶಾಸಕರ ಬೆಂಬಲ ಹೊಂದಿರುವ ವಿರೋಧ ಪಕ್ಷಗಳು ಸ್ವತಂತ್ರ ಅಭ್ಯರ್ಥಿ ಪರಿಮಲ್ ನಾಥ್ವಾನಿಗೆ ಬೆಂಬಲ ಘೋಷಿಸಿವೆ.

ಈ ಹಿನ್ನೆಲೆಯಲ್ಲಿ ರಾಜ್ಯಸಭೆಯ ಎರಡು ಸ್ಥಾನಗಳಿಗಾಗಿ ನಡೆಯುತ್ತಿರುವ ಚುನಾವಣೆ ರಾಜಕೀಯವಾಗಿ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಮತ ಎಣಿಕೆ ಬಳಿಕ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

Share This Article
Leave a Comment