ಮುಂಬೈ: ಗಣೇಶೋತ್ಸವದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಮಧ್ಯ ರೈಲ್ವೆ (Central Railway) ಸೆಪ್ಟೆಂಬರ್ 11ರಿಂದ 27ರವರೆಗೆ ಒಟ್ಟು 246 ಗಣಪತಿ ವಿಶೇಷ ರೈಲುಗಳನ್ನು ಸಂಚರಿಸಲು ನಿರ್ಧರಿಸಿದೆ.
ಗಣೇಶ ಭಕ್ತರ ಅನುಕೂಲಕ್ಕಾಗಿ ಈ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದ್ದು, ಮುಂಬೈ ಮತ್ತು ಪುಣೆಯನ್ನು ಸಾವಂತವಾಡಿ ರಸ್ತೆ, ರತ್ನಗಿರಿ ಹಾಗೂ ಮಡಗಾಂವ್ ಸಂಪರ್ಕಿಸುವ 184 ಮೀಸಲು (Reserved) ರೈಲುಗಳು ಇದರಲ್ಲಿ ಸೇರಿವೆ.
ಇದಲ್ಲದೆ, ದಿವಾ–ಖೇಡ್ ನಡುವಿನ ಮಾರ್ಗದಲ್ಲಿ 62 ಮೀಸಲು ರಹಿತ (Unreserved) ವಿಶೇಷ ರೈಲುಗಳನ್ನೂ ಮಧ್ಯ ರೈಲ್ವೆ ಕಾರ್ಯಾಚರಣೆಗಿಳಿಸಲಿದೆ.
ಮೀಸಲು ರೈಲುಗಳ ಟಿಕೆಟ್ ಬುಕ್ಕಿಂಗ್ ಆಗಸ್ಟ್ 1ರಿಂದ ದೇಶದ ಎಲ್ಲಾ ರೈಲ್ವೆ ಮೀಸಲು ಕೌಂಟರ್‌ಗಳಲ್ಲಿ ಹಾಗೂ ಐಆರ್‌ಸಿಟಿಸಿ (IRCTC) ವೆಬ್‌ಸೈಟ್‌ನಲ್ಲಿ ಆರಂಭವಾಗಲಿದೆ.
ಈ ವಿಶೇಷ ರೈಲುಗಳ ಸಮಯಪಟ್ಟಿ ಹಾಗೂ ಇತರ ವಿವರಗಳು ರಾಷ್ಟ್ರೀಯ ರೈಲು ಮಾಹಿತಿ ವ್ಯವಸ್ಥೆ (NTES) ವೆಬ್‌ಸೈಟ್ ಮತ್ತು ಎನ್‌ಟಿಇಎಸ್ ಮೊಬೈಲ್ ಆ್ಯಪ್‌ನಲ್ಲಿ ಲಭ್ಯವಿವೆ ಎಂದು ಮಧ್ಯ ರೈಲ್ವೆ ತಿಳಿಸಿದೆ.
ಗಣೇಶೋತ್ಸವದ ಅವಧಿಯಲ್ಲಿ ಕೊಂಕಣ ಪ್ರದೇಶ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಹೆಚ್ಚಾಗುವ ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸುವ ಉದ್ದೇಶದಿಂದ ಈ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಲಾಗಿದೆ.


