ಇರಾನ್‌ನಲ್ಲಿ ಉದ್ರಿಕ್ತ ಪರಿಸ್ಥಿತಿ: ಪ್ರತಿಭಟನಾ ದಮನದಲ್ಲಿ 3 ಸಾವಿರ ಮೀರಿದ ಸಾವಿನ ಸಂಖ್ಯೆ

1 Min Read
1 Min Read

ಇರಾನ್‌ನಲ್ಲಿ ನಡೆದ ಸರ್ಕಾರದ ವಿರೋಧಿ ಪ್ರತಿಭಟನೆಗಳ ಮೇಲೆ ನಡೆಸಿದ ಕಠಿಣ ದಮನದ ಪರಿಣಾಮ ಸಾವಿನ ಸಂಖ್ಯೆ 3,090ಕ್ಕೆ ಏರಿಕೆಯಾಗಿದೆ. ರಾಜಧಾನಿ ಟೆಹ್ರಾನ್ನಲ್ಲಿ ಈಗ ಪರಿಸ್ಥಿತಿ ಮೇಲ್ನೋಟಕ್ಕೆ ಶಾಂತವಾಗಿರುವಂತೆ ಕಾಣುತ್ತಿದರೂ, ಒಳಗಡೆ ಉದ್ವಿಗ್ನತೆ ಮುಂದುವರಿದಿದೆ. ಬೀದಿಗಳಲ್ಲಿ ಚಟುವಟಿಕೆ ಪುನರಾರಂಭವಾಗಿದ್ದು, ಅಂಗಡಿ-ಮಳಿಗೆಗಳು ತೆರೆಯಲಾಗಿದೆ. ಆದರೆ, ಕಳೆದ ಒಂದು ವಾರದಿಂದ ಇಂಟರ್‌ನೆಟ್ ಸೇವೆ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು ಎಂಬುದು ಆತಂಕ ಹೆಚ್ಚಿಸಿದೆ.

ಈ ನಡುವೆ, ಕಠಿಣ ನಿಲುವಿನ ಧಾರ್ಮಿಕ ನಾಯಕ ಆಯತೊಲ್ಲಾ ಅಹ್ಮದ್ ಖಾತಮಿ ಬಂಧಿತ ಪ್ರತಿಭಟನಾಕಾರರಿಗೆ ಮರಣದಂಡನೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕಠಿಣ ಎಚ್ಚರಿಕೆ ನೀಡಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ನೂರಾರು ಮರಣದಂಡನೆಗಳನ್ನು ರದ್ದುಪಡಿಸಿದ್ದಕ್ಕಾಗಿ ಇರಾನ್ ನಾಯಕತ್ವಕ್ಕೆ ಧನ್ಯವಾದ ತಿಳಿಸಿದ್ದಾರೆ.

ಇತ್ತ, ದೇಶತ್ಯಾಗದಲ್ಲಿರುವ ಕ್ರೌನ್ ಪ್ರಿನ್ಸ್ ರೆಜಾ ಪಹ್ಲವಿ ಇರಾನಿಯನ್ನರಿಗೆ ಪ್ರತಿಭಟನೆ ಮುಂದುವರಿಸಲು ಕರೆ ನೀಡಿದ್ದು, ಆಡಳಿತ ಪತನವಾದರೆ ತಾವು ಇರಾನ್‌ಗೆ ಮರಳುವುದಾಗಿ ಭರವಸೆ ನೀಡಿದ್ದಾರೆ.

ಡಿಸೆಂಬರ್ 28ರಂದು ಆರಂಭವಾದ ಈ ಪ್ರತಿಭಟನೆಗಳು ದೇಶದ ದುರ್ಬಲ ಆರ್ಥಿಕ ಪರಿಸ್ಥಿತಿ, ಏರಿಕೆಯಾಗುತ್ತಿರುವ ದರ ಏರಿಕೆ ಮತ್ತು ಇರಾನ್ ಕರೆನ್ಸಿಯ ಕುಸಿತದ ಹಿನ್ನೆಲೆಯಲ್ಲೇ ಭುಗಿಲೆದ್ದವು. ಸರ್ಕಾರದ ವರದಿ ಪ್ರಕಾರ, ಪ್ರತಿಭಟನೆಗಳಲ್ಲಿ 350 ಮಸೀದಿಗಳು, 126 ಪ್ರಾರ್ಥನಾ ಮಂದಿರಗಳು, 400 ಆಸ್ಪತ್ರೆಗಳು, 106 ಆಂಬ್ಯುಲೆನ್ಸ್‌ಗಳು ಮತ್ತು 71 ಅಗ್ನಿಶಾಮಕ ವಾಹನಗಳು ಹಾನಿಗೊಳಗಾಗಿವೆ. ಇದು ಪರಿಸ್ಥಿತಿಯ ತೀವ್ರತೆಯನ್ನು ಸ್ಪಷ್ಟಪಡಿಸುತ್ತದೆ

Share This Article