ಪ್ಯಾರಿಸ್‌ನಲ್ಲಿ ಮೋದಿ–ಮಿಸ್ಟ್ರಲ್ AI ಮುಖ್ಯಸ್ಥರ ಭೇಟಿ: ಕೃತಕ ಬುದ್ಧಿಮತ್ತೆ ಸಹಭಾಗಿತ್ವಕ್ಕೆ ಹೊಸ ದಾರಿ

1 Min Read
1 Min Read

ಪ್ಯಾರಿಸ್: ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್‌ನಲ್ಲಿ ಮಿಸ್ಟ್ರಲ್ AI ಸಂಸ್ಥೆಯ ಸಹ-ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆರ್ಥರ್ ಮೆನ್ಷ್ ಅವರನ್ನು ಭೇಟಿ ಮಾಡಿ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದ ಬೆಳವಣಿಗೆ ಮತ್ತು ಸಹಕಾರದ ಅವಕಾಶಗಳ ಕುರಿತು ಚರ್ಚೆ ನಡೆಸಿದರು.

ಭೇಟಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ, ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ AI ಪರಿಸರ ವ್ಯವಸ್ಥೆ ಹಾಗೂ ನವೋದ್ಯಮ ಕ್ಷೇತ್ರದ ಅಪಾರ ಅವಕಾಶಗಳನ್ನು ಪ್ರಸ್ತಾಪಿಸಿದರು. ತಂತ್ರಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಭಾರತ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುತ್ತಿರುವುದನ್ನು ಅವರು ಉಲ್ಲೇಖಿಸಿದರು.

ಮಿಸ್ಟ್ರಲ್ AI ಮುಖ್ಯಸ್ಥ ಆರ್ಥರ್ ಮೆನ್ಷ್, ಭಾರತದೊಂದಿಗೆ ತಂತ್ರಜ್ಞಾನ ಸಹಭಾಗಿತ್ವ ವಿಸ್ತರಿಸಲು ಸಂಸ್ಥೆ ಆಸಕ್ತಿ ಹೊಂದಿದೆ ಎಂದು ತಿಳಿಸಿದರು. ಭಾರತೀಯ ಕಂಪನಿಗಳೊಂದಿಗೆ ಕೈಜೋಡಿಸಿ ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡುವ ಜೊತೆಗೆ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳ ಅಭಿವೃದ್ಧಿಗೆ ಸಹಕಾರ ನೀಡಲು ಮಿಸ್ಟ್ರಲ್ AI ಸಿದ್ಧವಾಗಿದೆ ಎಂದು ಅವರು ಹೇಳಿದರು.

ಭಾರತ ಮತ್ತು ಫ್ರಾನ್ಸ್ ನಡುವಿನ ತಂತ್ರಜ್ಞಾನ ಸಹಕಾರಕ್ಕೆ ಈ ಭೇಟಿ ಮತ್ತಷ್ಟು ಬಲ ತುಂಬುವ ನಿರೀಕ್ಷೆಯಿದ್ದು, AI ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಪಾಲುದಾರಿಕೆಗೆ ಹೊಸ ಅವಕಾಶಗಳನ್ನು ತೆರೆದಿಡಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Share This Article