ದಲಿತ ಹಕ್ಕುಗಳ ಸಮಿತಿ (ಡಿ.ಹೆಚ್.ಎಸ್)‌ – ಕುಣಿಗಲ್‌ ವತಿಯಿಂದ ಬಡ್ಜೆಟ್ ಪೂರ್ವ ಹೋರಾಟ‌

3 Min Read
3 Min Read

ತುಮಕೂರು ಜಿಲ್ಲೆ ಮತ್ತು ಕುಣಿಗಲ್‌ ತಾಲ್ಲೂಕು ಸಮಿತಿ ವತಿಯಿಂದ

1. ಭೂಮಿ, ವಸತಿ, ಸ್ಮಶಾನ ಭೂಮಿ, ಗಂಗಾ ಕಲ್ಯಾಣ ಕೊಳವೆ ಭಾವಿ, ಸ್ವಯಂ ಉದ್ಯೋಗ ಸಾಲ ಸೌಲಭ್ಯಕ್ಕೆ ಆದ್ಯತೆ ನೀಡಬೇಕು
2. ದಲಿತರಿಗೆ ದೇವಸ್ಥಾನ ಪ್ರವೇಶ ತಡೆ ಅನಾಗರಿಕ ಅಸ್ಪೃಶ್ಯತೆ ಆಚರಣೆ ಮತ್ತು ಜಾತಿ ತಾರತಮ್ಯ ತಡೆಗಟ್ಟಲು ಜಿಲ್ಲೆಗೊಂದು ತ್ವರಿತ ನ್ಯಾಯಾಲಯ ಸ್ಥಾಪಿಸಿ
3. ಎಸ್ ಸಿ ಎಸ್ ಟಿ/ಟಿ ಎಸ್ ಪಿ ಉಪ ಯೋಜನೆ ಸಾಧಕ-ಬಾಧಕ ಕುರಿತು ವಿಧಾನಸಭೆಯ ವಿಶೇಷ ಅಧಿವೇಶನ ಕರೆದು ಪರಾಮರ್ಶೆ, ಚರ್ಚೆ ನಡೆಸಬೇಕೆಂದು
ಒತ್ತಾಯಿಸಿ ತಹಶೀಲ್ಧಾರ್‌ ಮೂಲಕ ಸರ್ಕಾರಕ್ಕೆ ಘೋ಼ಷಣೆಯ ಬಡ್ಜೆಟ್‌ ಬೇಡ ಆಚರಣೆಯ ಬಡ್ಜೆಟ್‌ ಬೇಕೆಂದು ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಡಿ.ಎಸ್.ಎಸ್‌ ಜಿಲ್ಲಾ ಸಂಚಾಲಕರಾದ ವಿ.ಶಿವಶಂಕರ್‌ ರವರು ಮಾತನಾಡಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದಲಿತರಿಗಾಗಿ ಮೀಸಲಿರಿಸಿದ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸುವುದನ್ನು ಖಂಡಿಸಿದರು. ಎಸ್‌.ಸಿ.ಪಿ/ಟಿ.ಎಸ್.ಪಿ ಹಣವನ್ನು ಸಮಗ್ರವಾಗಿ ಜಾರಿಮಾಡಿ ಪ್ರತಿ ಫಲಾನುಭವಿಗೂ ತಲುಪಬೇಕು ಆ ಮೂಲಕ ದಲಿತರ ಆರ್ಥಿಕ ಸಾಮಾಜಿಕ ಸಬಲೀಕರಣ ಆಗಬೇಕು ಎಂದು ಒತ್ತಾಯಿಸಿದರು. 

ತುಮಕೂರು ಜಿಲ್ಲಾ ಅಧ್ಯಕ್ಷರಾದ ರಾಜು ವೆಂಕಟಪ್ಪ ಮಾತನಾಡಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಚುನಾವಣಾ ಪೂರ್ವದ ಪ್ರಣಾಳಿಕೆಯಲ್ಲಿ ದಲಿತರ ಮೀಸಲು ಹಣ (ಎಸ್.ಸಿ.ಎಸ್.ಪಿ/ಟಿ.ಎಸ್.ಪಿ) ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತೇವೆಂದು ಎಲ್ಲಿಯೂ ಹೇಳಿರಲಿಲ್ಲ. ಆದರೆ ದಲಿತರ ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ದಲಿತರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಅನ್ಯಾಯ ವೆಸಗುತ್ತಾ ಬಂದಿದೆ, ಉದಾಹರಣೆಗೆ ದಲಿತರ ಮೀಸಲು ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಿ ದಲಿತರ ಶ್ರೇಯೋಭಿವೃದ್ದಿಗೆ ಮಾರಕವಾಗಿದೆ. ಒಳಮೀಸಲಾತಿ ಗೊಂದಲ ಸೃಷ್ಟಿಸಿ ದಲಿತರ ಐಕ್ಯತೆಯನ್ನು ಒಡೆದು ಅಧಿಕಾರಶಾಹಿ ಆಡಳಿತ ನಡೆಸುತ್ತಿದೆ, ಒಳಮೀಸಲಾತಿ ಗೊಂದಲದಿಂದಾಗಿ ಲಕ್ಷಾಂತರ ಮಂದಿ ಉದ್ಯೋಗದಿಂದ ವಂಚಿತರಾಗಿದ್ದಾರೆ. ಅವರ ಭವಿಷ್ಯ ಅತಂತ್ರ ಸ್ತಿಥಿಯಲ್ಲಿದೆ ಎಂದರು.
ರಾಜ್ಯದಲ್ಲಿ ಒಟ್ಟು ದಲಿತರ ಜನಸಂಖ್ಯೆ ಶೇ. 24.17 ರಷ್ಟಿದ್ದು 3/1 ಭಾಗ ದಲಿತರಿದ್ದಾರೆ. 1,09,29,347 ಪರಿಶಿಷ್ಟ ಜಾತಿಯವರು 42, 81,389 ಪರಿಶಿಷ್ಟ ಪಂಗಡದವರು ಇದ್ದಾರೆ. ಪ್ರತಿ ವರ್ಷ ದಲಿತರ ಜನಸಂಖ್ಯೆಗೆ ಅನುಗುಣವಾಗಿ 37 ಇಲಾಖೆಗಳಿಗೆ SCSP/TSP ಉಪ ಯೋಜನೆ ಹಣ ಹಂಚಿಕೆಯಾಗಿದೆ. 13 ವರ್ಷಗಳಿಂದ ಮೂರು ಲಕ್ಷ 46,000 ಕೋಟಿ ಹಣ ವೆಚ್ಚ ಮಾಡಿ ಕಾಯ್ದೆಯನ್ನು ಜಾರಿಗೆ ತಂದಿದೆ. 2024- 25 ರಲ್ಲಿ 39,957.77 ಕೋಟಿ ರೂಗಳು 2025 26 ಕಳೆದ ವರ್ಷ 42,17.51 ಕೋಟಿ ರೂಗಳನ್ನು ಖರ್ಚು ಮಾಡಿದೆ. ಆದರೆ ದಲಿತರ ಜೀವನ ಅಭಿವೃದ್ಧಿ ಎಷ್ಟು? ದಲಿತರ ಸಾಮಾಜಿಕ ಆರ್ಥಿಕ ಸಾಧನೆ ಏನು? ಯೋಜನೆಗಳನ್ನು ಜಾರಿ ಮಾಡದೆ ಇರುವ ಅಧಿಕಾರಿಗಳ ಮೇಲೆ ಕ್ರಮಗಳೇನು? ಭ್ರಷ್ಟ ಅಧಿಕಾರಿಗಳಿಗೆ ಆದ ಶಿಕ್ಷೆಗಳೇನು? ಇವುಗಳ ಸಾಧಕ ಬಾಧಕ ಬಗ್ಗೆ ವಿಧಾನಸಭೆಯಲ್ಲಿ ಪರಾಮರ್ಶೆ ಚರ್ಚೆ ನಡೆಸಬೇಕೆಂದು ಒತ್ತಾಯಿಸಿದರು.
ಅದೇರೀತಿ ಕುಣಿಗಲ್‌ ತಾಲ್ಲೂಕಿನಲ್ಲೂ ದಲಿತರು ಅನುಭವಿಸುತಿರುವ ಜ್ವಲಂತ ಸಮಸ್ಯೆಗಳ ಬಗ್ಗೆಯೂ ಗಮನ ಸೆಳೆದರು. ಕುಣಿಗಲ್‌ ಶಾಶಕರಾದ ಡಾ.ರಂಗನಾಥ್‌ ರವರು ಎರಡು ಬಾರಿ ಶಾಶಕರಾಗುವಲ್ಲಿ ದಲಿತರ ಮತಗಳು ನಿರ್ಣಾಯಕ ಪಾತ್ರವಹಿಸಿವೆ. ಆದರೆ ದಲಿತರಿಗೆ ಇದೂ ವರೆಗೂ ಒಂದೇ ಒಂದು ಕುಂಟೆ ಭೂಮಿ ನೀಡುವಲ್ಲಿ ವಿಫಲವಾಗಿದ್ದಾರೆ. ಶೀಘ್ರವೇ ಬಗರ್ ಹುಕುಂ ಸಮಿತಿ ಸಭೆ ಕರೆದು ಪಾರಂ ನಂ.53 ಮತ್ತು 57 ರಲ್ಲಿ ಅರ್ಜಿ ಸಲ್ಲಿಸಿಕೊಂಡಿರುವ ಬಡ ಭೂ ನಿರ್ಗತಿಕರಿಗೆ ಭೂಮಿ ಪಟ್ಟಾ ನೀಡಬೇಕೆಂದು ಒತ್ತಾಯಿಸಿದರು.‌ ಜೊತೆಗೆ ಭೂ ನಿರ್ಗತಿಕರನ್ನು ಸರ್ವೇ ಮಾಡಿಸಿ ಕಾನೂನು ಬಾಹಿರವಾಗಿ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ಕಂದಾಯ ಇಲಾಖೆ ಸುಪರ್ದಿಗೆ ಪಡೆದು ಭೂ ನಿರ್ಗತಿಕ ದಲಿತರ ಕುಟುಂಬಕ್ಕೆ ತಲಾ 4 ಎಕರೆ ಭೂಮಿ ಹಂಚಬೇಕು ಎಂದು ಹೇಳಿದರು. 

ಪ್ರತಿಭಟನೆಯಲ್ಲಿ ತಾಲ್ಲೂಕಿನ ವಿವಿದ ಗ್ರಾಮಗಳಿಂದ ಹಲವಾರು ಡಿ.ಹೆಚ್.ಎಸ್.‌ ಕಾರ್ಯಕರ್ತರು ಭಾಗವಹಿಸಿದ್ದರು. ಸತೀಶ್‌ ಬೆಳ್ಳಿಗೆರೆ, ರಾಜು ತುವ್ವೇಕೆರೆ, ಶ್ರೀನಿವಾಸ್‌ ಉಜ್ಜನಿ, ಸಂತೋಷ್‌ ಉಜ್ಜನಿ, ಗಿರೀಶ್‌ ತರೀಕೆರೆ, ಸೌಭಾಗ್ಯಮ್ಮ, ಗೌರಮ್ಮ, ಶಾಂತಮ್ಮ, ಚಂದ್ರು ಬ್ಯಾಡಗೆರೆ, ಪ್ರಮೋದ್‌ ತಿಪ್ಪೂರು, ಅಬ್ದುಲ್‌ ಮುನಾಫ್‌, ವಿಜಯ್‌ ಕುಮಾರ್‌ ಬೆಳ್ಳಿಗೆರೆ,ದೇವರಾಜು ನಡೆಮಾವಿನಪುರ, ನಾಗರಾಜು ಬಿಳಿದೇವಾಲಯ ಮುಂತಾದವರು ಇದ್ದರು.

Share This Article
Leave a Comment