ವಿಮಾನ ರದ್ದತಿಗಳ ನಡುವೆ ರೈಲ್ವೇ ನೆರವು – 89 ವಿಶೇಷ ರೈಲುಗಳ ಘೋಷಣೆ

1 Min Read
1 Min Read

ಚಳಿಗಾಲದ ಪ್ರಯಾಣಿಕರ ಹೆಚ್ಚಿದ ಬೇಡಿಕೆ ಹಾಗೂ ವಿಮಾನ ರದ್ದತಿಗಳ ಹಿನ್ನೆಲೆ, ದೇಶದ ಹಲವು ವಲಯಗಳಲ್ಲಿ ರೈಲ್ವೇ ಇಲಾಖೆ ಮುಂದಿನ ಎರಡು ದಿನಗಳಿಗೆ 89 ವಿಶೇಷ ರೈಲುಗಳ ಸಂಚಾರಕ್ಕೆ ಅನುಮತಿ ನೀಡಿದೆ. ಪ್ರಯಾಣಿಕರ ಸುಗಮ ಸಂಚಾರಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಕೇಂದ್ರೀಯ ರೈಲ್ವೇ ವಲಯದಲ್ಲಿ ಒಟ್ಟು 14 ವಿಶೇಷ ರೈಲುಗಳನ್ನು ಘೋಷಿಸಲಾಗಿದ್ದು, ಪುಣೆ–ಬೆಂಗಳೂರು, ಪುಣೆ–ದೆಹಲಿ, ಮುಂಬೈ–ದೆಹಲಿ ಸೇರಿದಂತೆ ಹಲವಾರು ಪ್ರಮುಖ ಮಾರ್ಗಗಳಲ್ಲಿ ಸಂಚಾರ ಮಾಡಲಿವೆ.

ಪಶ್ಚಿಮ ರೈಲ್ವೇ ವಲಯದಲ್ಲಿ 7 ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಲಾಗಿದೆ. ಭಿವಾಣಿ–ಮುಂಬೈ, ಮುಂಬೈ–ಶಾಕುರಬಸ್ತಿ ಸೇರಿದಂತೆ ಜನಪ್ರಿಯ ಮಾರ್ಗಗಳು ಇದರಲ್ಲಿ ಸೇರಿವೆ.

ದಕ್ಷಿಣ ಮಧ್ಯ ರೈಲ್ವೇ ಕೂಡ ಮೂರು ಪ್ರಮುಖ ವಿಶೇಷ ರೈಲುಗಳನ್ನು ಸಂಚಾರಕ್ಕೆ ಬಿಡುತ್ತಿದೆ. ಚೆರ್ಲಾಪಳ್ಳಿ–ಶಾಲಿಮಾರ್, ಸಿಕಂದರಾಬಾದ್–ಚೆನ್ನೈ ಎಗ್ಮೋರ್, ಹಾಗೂ హైదరాబాద్–ಮುಂಬೈ ಮಾರ್ಗಗಳಲ್ಲಿ ಈ ರೈಲುಗಳು ಓಡಲಿವೆ.

ರೈಲ್ವೇ ಇಲಾಖೆಯ ಈ ತ್ವರಿತ ಕ್ರಮ ಪ್ರಯಾಣಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

Share This Article