ದೆಹಲಿ: ಶ್ರೀಲಂಕಾದ ಪ್ರಧಾನ ಮಂತ್ರಿಗಳಾದ ಗೌರವಾನ್ವಿತ ಡಾ. ಹರಿಣಿ ಅಮರಸೂರ್ಯ ಅವರು ಇಂದು(ಅ.17) ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಆತ್ಮೀಯ ಸ್ವಾಗತವನ್ನು ನೀಡುತ್ತಾ, ಪ್ರಧಾನಿಯವರು ತಮ್ಮ ಭೇಟಿಯು ಐತಿಹಾಸಿಕ ಮತ್ತು ಬಹುಮುಖಿ ಭಾರತ–ಶ್ರೀಲಂಕಾ ಸಂಬಂಧಗಳಿಗೆ ಹೊಸ ಆವೇಗವನ್ನು ನೀಡುತ್ತದೆ ಎಂದು ತಿಳಿಸಿದರು.
ಈ ವರ್ಷದ ಏಪ್ರಿಲ್ನಲ್ಲಿ ಶ್ರೀಲಂಕಾಕ್ಕೆ ತಾವು ನೀಡಿದ್ದ ಭೇಟಿಯನ್ನು ಪ್ರಧಾನಿಯವರು ನೆನಪಿಸಿಕೊಂಡರು, ಈ ಸಂದರ್ಭದಲ್ಲಿ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಅವರೊಂದಿಗೆ ಸಹಕಾರದ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡ ಫಲಪ್ರದ ಚರ್ಚೆಗಳನ್ನು ನಡೆಸಿದ್ದರು.
ಶಿಕ್ಷಣ, ತಂತ್ರಜ್ಞಾನ, ನಾವೀನ್ಯತೆ ಅಭಿವೃದ್ಧಿ ಸಹಕಾರ ಮತ್ತು ನಮ್ಮ ಮೀನುಗಾರರ ಕಲ್ಯಾಣ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಕ್ರಮಗಳ ಕುರಿತು ಉಭಯ ನಾಯಕರು ಚರ್ಚಿಸಿದರು.
ಭಾರತ ಮತ್ತು ಶ್ರೀಲಂಕಾ ನಡುವಿನ ವಿಶೇಷ ಸಂಬಂಧಗಳನ್ನು ಎತ್ತಿ ತೋರಿಸಿದ ಪ್ರಧಾನಿಯವರು, ಎರಡೂ ದೇಶಗಳ ಹಂಚಿಕೆಯ ಅಭಿವೃದ್ಧಿ ಪ್ರಯಾಣದಲ್ಲಿ ಒಟ್ಟಾಗಿ ಕೆಲಸ ಮಾಡುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.
ಪ್ರಧಾನಿಯವರು ಅಧ್ಯಕ್ಷ ದಿಸಾನಾಯಕ ಅವರಿಗೆ ತಮ್ಮ ಆತ್ಮೀಯ ಶುಭಾಶಯಗಳನ್ನು ತಿಳಿಸಿದರು ಮತ್ತು ಅವರ ನಿರಂತರ ಕಾರ್ಯಯೋಜನೆಗಳನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಈಜಿಪ್ಟ್ ವಿದೇಶಾಂಗ ಸಚಿವರು

ಈಜಿಪ್ಟ್ ನ ವಿದೇಶಾಂಗ ಸಚಿವ ಡಾ. ಬದರ್ ಅಬ್ದೆಲಟ್ಟಿ ಅವರು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಗಾಜಾ ಶಾಂತಿ ಒಪ್ಪಂದದಲ್ಲಿ ಈಜಿಪ್ಟ್ ನ ನಿರ್ಣಾಯಕ ಪಾತ್ರಕ್ಕಾಗಿ ಅಧ್ಯಕ್ಷರಾದ ಸಿಸಿ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಅದು ಈ ಪ್ರದೇಶದಲ್ಲಿ ಶಾಶ್ವತ ಶಾಂತಿಗೆ ಕಾರಣವಾಗಲಿದೆ ಎಂದು ಅವರು ಆಶಿಸಿದರು.
ಭೇಟಿಯ ಸಮಯದಲ್ಲಿ ನಡೆದ ಮೊದಲ ಭಾರತ–ಈಜಿಪ್ಟ್ ಕಾರ್ಯತಂತ್ರದ ಸಂವಾದದ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ವಿದೇಶಾಂಗ ಸಚಿವರಾದ ಅಬ್ದೆಲಟ್ಟಿ ತಮ್ಮ ಅವರು ವಿವರಿಸಿದರು.
ವ್ಯಾಪಾರ, ತಂತ್ರಜ್ಞಾನ, ಇಂಧನ, ರಕ್ಷಣೆ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ದ್ವಿಪಕ್ಷೀಯ ಸಹಕಾರದ ವಿವಿಧ ಕ್ಷೇತ್ರಗಳಲ್ಲಿ ಸಾಧಿಸುತ್ತಿರುವ ಪ್ರಗತಿಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೃಪ್ತಿ ವ್ಯಕ್ತಪಡಿಸಿದರು.


