ಭಾರತದ ರಫ್ತಿನಲ್ಲಿ ಭರ್ಜರಿ ಏರಿಕೆ; ಏಪ್ರಿಲ್–ಜೂನ್ ಅವಧಿಯಲ್ಲಿ 232 ಬಿಲಿಯನ್ ಡಾಲರ್ ದಾಟಿದ ರಫ್ತು

1 Min Read
1 Min Read

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಜೂನ್‌ವರೆಗಿನ ಮೊದಲ ತ್ರೈಮಾಸಿಕದಲ್ಲಿ ಭಾರತದ ಒಟ್ಟು ರಫ್ತು (ಸರಕು ಮತ್ತು ಸೇವೆಗಳು ಸೇರಿ) 232 ಬಿಲಿಯನ್ ಅಮೆರಿಕನ್ ಡಾಲರ್‌ಗಿಂತ ಹೆಚ್ಚಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 11.37 ಶೇಕಡಾ ಬೆಳವಣಿಗೆ ದಾಖಲಿಸಿದೆ.

ಈ ಕುರಿತು ಮಾಹಿತಿ ನೀಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಜೂನ್ ತಿಂಗಳಲ್ಲಿನ ಒಟ್ಟು ರಫ್ತು 73.45 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಿದ್ದು, ಇದು ಕಳೆದ ವರ್ಷದ ಜೂನ್‌ಗೆ ಹೋಲಿಸಿದರೆ 9.48 ಶೇಕಡಾ ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಜೂನ್ ತಿಂಗಳ ರಫ್ತು ಬೆಳವಣಿಗೆಗೆ ರತ್ನ ಮತ್ತು ಆಭರಣಗಳು (Gems & Jewellery), ಎಂಜಿನಿಯರಿಂಗ್ ಉತ್ಪನ್ನಗಳು, ಸಾವಯವ ಮತ್ತು ಅಸಾವಯವ ರಾಸಾಯನಿಕಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು ಹಾಗೂ ಅಕ್ಕಿ ರಫ್ತು ಪ್ರಮುಖ ಕೊಡುಗೆ ನೀಡಿವೆ.

ವಿಶೇಷವಾಗಿ ಎಲೆಕ್ಟ್ರಾನಿಕ್ ಉತ್ಪನ್ನಗಳ ರಫ್ತು ಗಮನಾರ್ಹ ಏರಿಕೆ ಕಂಡಿದ್ದು, ಕಳೆದ ವರ್ಷದ ಜೂನ್‌ನಲ್ಲಿ 4.14 ಬಿಲಿಯನ್ ಡಾಲರ್ ಇದ್ದ ರಫ್ತು, ಈ ವರ್ಷದ ಜೂನ್‌ನಲ್ಲಿ 4.93 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಇದು ಸುಮಾರು 19 ಶೇಕಡಾ ಬೆಳವಣಿಗೆಯನ್ನು ಸೂಚಿಸುತ್ತದೆ.

ಇನ್ನೊಂದೆಡೆ, ಜೂನ್ ತಿಂಗಳ ಒಟ್ಟು ಆಮದು (ಸರಕು ಮತ್ತು ಸೇವೆಗಳು ಸೇರಿ) 88.76 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದ್ದು, ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ 26 ಶೇಕಡಕ್ಕಿಂತ ಅಧಿಕ ಏರಿಕೆ ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

Share This Article