ಲಂಡನ್: ಕೇವಲ 21 ವರ್ಷದ ಚೆಕ್ ಆಟಗಾರ್ತಿ ಲಿಂಡಾ ನೊಸ್ಕೋವಾ ತಮ್ಮ ವೃತ್ತಿಜೀವನದ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಲಂಡನ್‌ನ ಸೆಂಟರ್ ಕೋರ್ಟ್‌ನಲ್ಲಿ ನಡೆದ ವಿಂಬಲ್ಡನ್ ಮಹಿಳೆಯರ ಸಿಂಗಲ್ಸ್ ಫೈನಲ್ನಲ್ಲಿ ಅವರು ತಮ್ಮದೇ ದೇಶದ ಕರೋಲಿನಾ ಮುಚೋವಾ ಅವರನ್ನು 6-2, 5-7, 6-3 ಸೆಟ್‌ಗಳಿಂದ ಮಣಿಸಿ ಚೊಚ್ಚಲ ವಿಂಬಲ್ಡನ್ ಕಿರೀಟವನ್ನು ತಮ್ಮದಾಗಿಸಿಕೊಂಡರು.
ಈ ಗೆಲುವಿನೊಂದಿಗೆ, ಕಳೆದ ನಾಲ್ಕು ವರ್ಷಗಳಲ್ಲಿ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಮೂರನೇ ಚೆಕ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಲಿಂಡಾ ನೊಸ್ಕೋವಾ ಪಾತ್ರರಾದರು. ಇದಕ್ಕೂ ಮೊದಲು ಮಾರ್ಕೆಟಾ ವೊಂಡ್ರೌಶೋವಾ (2023) ಹಾಗೂ ಬಾರ್ಬೋರಾ ಕ್ರೆಜ್ಚಿಕೋವಾ (2024) ವಿಂಬಲ್ಡನ್ ಪ್ರಶಸ್ತಿ ಜಯಿಸಿದ್ದರು.
ಇಂದು ಪುರುಷರ ಫೈನಲ್
ಇಂದು ನಡೆಯಲಿರುವ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ವಿಶ್ವ ನಂ.1 ಆಟಗಾರ ಜಾನಿಕ್ ಸಿನರ್ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಎದುರಿಸಲಿದ್ದಾರೆ. ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8.30ಕ್ಕೆ ಆರಂಭವಾಗಲಿದೆ.
ಸೆಮಿಫೈನಲ್‌ನಲ್ಲಿ ಏಳು ಬಾರಿ ವಿಂಬಲ್ಡನ್ ಚಾಂಪಿಯನ್ ನೊವಾಕ್ ಜೊಕೊವಿಚ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ಸಿನರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಮತ್ತೊಂದೆಡೆ, ಬ್ರಿಟನ್‌ನ ವೈಲ್ಡ್‌ಕಾರ್ಡ್ ಆಟಗಾರ ಆರ್ಥರ್ ಫೆರಿ ಅವರನ್ನು ಮಣಿಸಿದ ಜ್ವೆರೆವ್ ತಮ್ಮ ಚೊಚ್ಚಲ ವಿಂಬಲ್ಡನ್ ಫೈನಲ್ ಪ್ರವೇಶ ಸಾಧಿಸಿದ್ದಾರೆ.
ಇಂದು ಮಹಿಳೆಯರ ಡಬಲ್ಸ್ ಫೈನಲ್
ಇದೇ ವೇಳೆ, ಇಂದು ನಡೆಯಲಿರುವ ಮಹಿಳೆಯರ ಡಬಲ್ಸ್ ಫೈನಲ್ನಲ್ಲಿ 10ನೇ ಶ್ರೇಯಾಂಕದ ಚೀನಾ–ಫ್ರಾನ್ಸ್ ಜೋಡಿ ಗುವೊ ಹನ್ಯು–ಕ್ರಿಸ್ಟಿನಾ ಮ್ಲಾಡೆನೋವಿಕ್, 2ನೇ ಶ್ರೇಯಾಂಕದ ಕೆನಡಾ–ಬ್ರೆಜಿಲ್ ಜೋಡಿ ಗ್ಯಾಬ್ರಿಯೆಲಾ ಡಬ್ರೋವ್ಸ್ಕಿ–ಲೂಯಿಸಾ ಸ್ಟೆಫಾನಿ ವಿರುದ್ಧ ಸೆಣಸಲಿದೆ.
ಈ ಪಂದ್ಯವು ಲಂಡನ್‌ನ ಸೆಂಟರ್ ಕೋರ್ಟ್‌ನಲ್ಲಿ ಭಾರತೀಯ ಕಾಲಮಾನ ಸಂಜೆ 5.30ಕ್ಕೆ ಆರಂಭವಾಗಲಿದೆ.


