ಬಿಜೆಪಿ ಸಂಘಟನೆಯಲ್ಲಿ ಮಹತ್ವದ ಬದಲಾವಣೆ: ಉತ್ತರ ಪ್ರದೇಶ, ಪಂಜಾಬ್, ಗುಜರಾತ್‌ಗೆ ಹೊಸ ಉಸ್ತುವಾರಿಗಳ ನೇಮಕ

1 Min Read
1 Min Read

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಉತ್ತರ ಪ್ರದೇಶ, ಪಂಜಾಬ್ ಮತ್ತು ಗುಜರಾತ್ ರಾಜ್ಯಗಳಿಗೆ ನೂತನ ಉಸ್ತುವಾರಿಗಳನ್ನು ನೇಮಿಸಿದ್ದಾರೆ.

ಪಕ್ಷದ ಸಂಘಟನಾ ಜವಾಬ್ದಾರಿಗಳಲ್ಲಿ ಪ್ರಮುಖ ಬದಲಾವಣೆ ಮಾಡಿರುವ ಬಿಜೆಪಿ, ಉತ್ತರ ಪ್ರದೇಶದ ಉಸ್ತುವಾರಿಯಾಗಿ ವಿನೋದ್ ತಾವಡೆ ಅವರನ್ನು ನೇಮಿಸಿದೆ. ಜಗದೀಶ್ ಈಶ್ವರಭಾಯಿ ಪಟೇಲ್ ಅವರನ್ನು ಉತ್ತರ ಪ್ರದೇಶದ ಸಹ-ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ಪಂಜಾಬ್ ರಾಜ್ಯದ ಉಸ್ತುವಾರಿಯಾಗಿ ಡಾ. ಸತೀಶ್ ಪೂನಿಯಾ ಅವರನ್ನು ನೇಮಿಸಲಾಗಿದ್ದು, ಗುಜರಾತ್‌ನ ಉಸ್ತುವಾರಿ ಜವಾಬ್ದಾರಿಯನ್ನು ತರುಣ್ ಚುಗ್ ಅವರಿಗೆ ವಹಿಸಲಾಗಿದೆ.

ಈ ನೇಮಕಾತಿಗಳ ಮೂಲಕ ಮೂರು ಪ್ರಮುಖ ರಾಜ್ಯಗಳಲ್ಲಿ ಪಕ್ಷದ ಸಂಘಟನಾ ಕಾರ್ಯಗಳಿಗೆ ಹೊಸ ವೇಗ ನೀಡಲು ಬಿಜೆಪಿ ಮುಂದಾಗಿದೆ. ರಾಜ್ಯ ಮಟ್ಟದಲ್ಲಿ ಪಕ್ಷದ ಸಂಘಟನೆ ಬಲಪಡಿಸುವುದು ಹಾಗೂ ಮುಂದಿನ ರಾಜಕೀಯ ಚಟುವಟಿಕೆಗಳನ್ನು ಸಮನ್ವಯಗೊಳಿಸುವಲ್ಲಿ ನೂತನ ಉಸ್ತುವಾರಿಗಳ ಪಾತ್ರ ಮಹತ್ವದ್ದಾಗಿರಲಿದೆ.

Share This Article