ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿತ: ಅಮೆರಿಕದ ದಾಸ್ತಾನು ಏರಿಕೆ ಪರಿಣಾಮ

1 Min Read
1 Min Read

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಂದು ಇಳಿಕೆಯಾಗಿದೆ. ಈ ವರ್ಷ ಜಾಗತಿಕ ತೈಲ ಬೇಡಿಕೆ ದುರ್ಬಲಗೊಳ್ಳುವ ಸಾಧ್ಯತೆ ಹಾಗೂ ಅಮೆರಿಕದಲ್ಲಿ ಕಚ್ಚಾ ತೈಲದ ದಾಸ್ತಾನು ಹೆಚ್ಚಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಮಾರುಕಟ್ಟೆಯ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡುತ್ತಿದ್ದಾರೆ.

ದಿನದ ವಹಿವಾಟಿನಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.1.8ರಷ್ಟು ಕುಸಿದು ಬ್ಯಾರೆಲ್‌ಗೆ 87.41 ಅಮೆರಿಕನ್ ಡಾಲರ್‌ಗೆ ತಲುಪಿತ್ತು.

ಅದೇ ರೀತಿ, ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್ (WTI) ಕಚ್ಚಾ ತೈಲದ ಬೆಲೆ ಶೇ.1.9ರಷ್ಟು ಇಳಿದು ಬ್ಯಾರೆಲ್‌ಗೆ 81.65 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿತ್ತು.

ಅಮೆರಿಕದ ಇಂಧನ ಮಾಹಿತಿ ಆಡಳಿತ (EIA) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಆಗಸ್ಟ್ 7ಕ್ಕೆ ಅಂತ್ಯಗೊಂಡ ವಾರದಲ್ಲಿ ಅಮೆರಿಕದ ವಾಣಿಜ್ಯ ಕಚ್ಚಾ ತೈಲ ದಾಸ್ತಾನು 1.74 ಕೋಟಿ ಬ್ಯಾರೆಲ್‌ಗಳಷ್ಟು ಏರಿಕೆಯಾಗಿ 42.44 ಕೋಟಿ ಬ್ಯಾರೆಲ್‌ಗಳಿಗೆ ತಲುಪಿದೆ.

ಇದು 2023ರ ಜನವರಿಯಿಂದೀಚೆಗೆ ಅಮೆರಿಕದ ತೈಲ ದಾಸ್ತಾನಿನಲ್ಲಿ ದಾಖಲಾಗಿರುವ ಅತಿದೊಡ್ಡ ಸಾಪ್ತಾಹಿಕ ಏರಿಕೆಯಾಗಿದೆ. ದಾಸ್ತಾನು ಹೆಚ್ಚಳ ಹಾಗೂ ಜಾಗತಿಕ ಬೇಡಿಕೆ ಕುರಿತ ಆತಂಕಗಳು ತೈಲ ಬೆಲೆಗಳ ಮೇಲೆ ಒತ್ತಡ ಹೇರಿವೆ.

Share This Article