ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ದೆಹಲಿ ಮೆಟ್ರೋ ರೈಲು ನಿಗಮ (DMRC) ಮಹತ್ವದ ಆದೇಶ ಹೊರಡಿಸಿದೆ. ಅದರಂತೆ, ಇಂದು ಬೆಳಗ್ಗೆ 7.30 ಗಂಟೆಯಿಂದ ಮುಂದಿನ ಆದೇಶದವರೆಗೆ 16 ಮೆಟ್ರೋ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಬಂದ್ ಮಾಡಲಾಗಿರುವ ಮೆಟ್ರೋ ನಿಲ್ದಾಣಗಳ ಪಟ್ಟಿ ಹೀಗಿದೆ:
- ಲೋಕ ಕಲ್ಯಾಣ ಮಾರ್ಗ
- ರಾಜೀವ್ ಚೌಕ್
- ಪಟೇಲ್ ಚೌಕ್
- ರಾಮಕೃಷ್ಣ ಆಶ್ರಮ ಮಾರ್ಗ
- ಬರಾಖಂಬಾ ರೋಡ್
- ಸುಪ್ರೀಂ ಕೋರ್ಟ್
- ಸೇವಾ ತೀರ್ಥ
- ಜನಪಥ್
- ಮಂಡಿ ಹೌಸ್
- ಸೆಂಟ್ರಲ್ ಸೆಕ್ರೆಟೇರಿಯಟ್
- ಐಟಿಒ
- ದೆಹಲಿ ಗೇಟ್
- ಇಂದ್ರಪ್ರಸ್ಥ
- ಖಾನ್ ಮಾರ್ಕೆಟ್
- ಜೋರ್ ಬಾಗ್
- ಶಿವಾಜಿ ಸ್ಟೇಡಿಯಂ
ಆದರೆ ಪ್ರಯಾಣಿಕರ ಅನುಕೂಲಕ್ಕಾಗಿ ರಾಜೀವ್ ಚೌಕ್, ಮಂಡಿ ಹೌಸ್ ಹಾಗೂ ಸೆಂಟ್ರಲ್ ಸೆಕ್ರೆಟೇರಿಯಟ್ ಮೆಟ್ರೋ ನಿಲ್ದಾಣಗಳಲ್ಲಿ ಇಂಟರ್‌ಚೇಂಜ್ (ಮಾರ್ಗ ಬದಲಾವಣೆ) ಸೌಲಭ್ಯ ಮಾತ್ರ ಮುಂದುವರಿಯಲಿದೆ ಎಂದು ಡಿಎಂಆರ್‌ಸಿ ಸ್ಪಷ್ಟಪಡಿಸಿದೆ.
ಭದ್ರತಾ ಪರಿಸ್ಥಿತಿಯನ್ನು ಅವಲಂಬಿಸಿ ಮುಂದಿನ ಆದೇಶ ಹೊರಬೀಳುವವರೆಗೆ ಈ ನಿಲ್ದಾಣಗಳಲ್ಲಿ ಪ್ರಯಾಣಿಕರ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ಇರುವುದಿಲ್ಲ ಎಂದು ಡಿಎಂಆರ್‌ಸಿ ತಿಳಿಸಿದೆ.


