ಬುಡಕಟ್ಟು ಸಂಶೋಧನಾ ಸಂಸ್ಥೆಗಳ ಬಲವರ್ಧನೆಗೆ ರಾಷ್ಟ್ರೀಯ ಕಾರ್ಯಾಗಾರ: ಭುವನೇಶ್ವರದಲ್ಲಿ ಇಂದು ಚಾಲನೆ

1 Min Read
1 Min Read

ಭುವನೇಶ್ವರ: ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ವತಿಯಿಂದ ಬುಡಕಟ್ಟು ಸಂಶೋಧನಾ ಸಂಸ್ಥೆಗಳ (Tribal Research Institutes – TRIs) ಬಲವರ್ಧನೆ ಕುರಿತ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವು ಇಂದಿನಿಂದ ಒಡಿಶಾದ ಭುವನೇಶ್ವರದಲ್ಲಿ ಆರಂಭವಾಗಲಿದೆ.

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುವಾಲ್ ಓರಾಂ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದು, ದೇಶದ ವಿವಿಧ ರಾಜ್ಯಗಳಿಂದ ಸುಮಾರು 200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಹಾಗೂ ವಾರಾಣಸಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ ನಡುವೆ ಮಹತ್ವದ ಒಪ್ಪಂದ ಪತ್ರಕ್ಕೆ (MoU) ಸಹಿ ಹಾಕಲಾಗುತ್ತದೆ.

ಕಾರ್ಯಾಗಾರದ ಪ್ರಮುಖ ಆಕರ್ಷಣೆಯಾಗಿ ‘TribeX’ ಎಂಬ ವಿಶೇಷ ಡಿಜಿಟಲ್ ಕಲಿಕಾ ವೇದಿಕೆಯನ್ನು ಅನಾವರಣಗೊಳಿಸಲಾಗುತ್ತದೆ. ಬುಡಕಟ್ಟು ಕಲೆ, ಸಂಸ್ಕೃತಿ, ಭಾಷೆಗಳು, ಸಾಂಪ್ರದಾಯಿಕ ಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿಗೆ ಮೀಸಲಾಗಿರುವ ದೇಶದ ಮೊದಲ ಡಿಜಿಟಲ್ ವೇದಿಕೆ ಎಂಬ ಹೆಗ್ಗಳಿಕೆ TribeXಗೆ ಸಿಗಲಿದೆ.

ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಬುಡಕಟ್ಟು ಸಂಶೋಧನಾ ಸಂಸ್ಥೆಗಳ ಕಾರ್ಯವೈಖರಿಯನ್ನು ಪರಿಶೀಲಿಸಿ, ಅವುಗಳನ್ನು ಜ್ಞಾನ ಕೇಂದ್ರಗಳು, ಸಾಂಸ್ಕೃತಿಕ ಸಂಪನ್ಮೂಲ ಕೇಂದ್ರಗಳು ಹಾಗೂ ಬುಡಕಟ್ಟು ಅಭಿವೃದ್ಧಿಗೆ ನೀತಿ ರೂಪಿಸುವ ಪ್ರಮುಖ ಸಂಸ್ಥೆಗಳಾಗಿ ರೂಪಿಸುವ ಸಮಗ್ರ ಕಾರ್ಯತಂತ್ರವನ್ನು ಸಿದ್ಧಪಡಿಸುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ.

Share This Article