CCITಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೊಸ ಬೆಂಬಲ; ಭಾರತದ ಪ್ರಸ್ತಾವನೆಗೆ 140 ರಾಷ್ಟ್ರಗಳ ಬೆಂಬಲ

1 Min Read
1 Min Read

ಭಾರತದ ಭಯೋತ್ಪಾದನೆ ವಿರೋಧಿ ಜಾಗತಿಕ ಒಪ್ಪಂದಕ್ಕೆ ವಿಶ್ವಸಂಸ್ಥೆಯಲ್ಲಿ ಮತ್ತೆ ಬಲವಾದ ಬೆಂಬಲ

ಭಾರತವು ಮೂರು ದಶಕಗಳ ಹಿಂದೆ ಮಂಡಿಸಿದ್ದ ಅಂತರರಾಷ್ಟ್ರೀಯ ಭಯೋತ್ಪಾದನೆ ಕುರಿತ ಸಮಗ್ರ ಒಪ್ಪಂದ (Comprehensive Convention on International Terrorism – CCIT) ಪ್ರಸ್ತಾವನೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮತ್ತೊಮ್ಮೆ ಬಲವಾದ ಬೆಂಬಲ ವ್ಯಕ್ತವಾಗಿದೆ.

ವಿಶ್ವಸಂಸ್ಥೆಯ ಜಾಗತಿಕ ಭಯೋತ್ಪಾದನೆ ನಿಗ್ರಹ ಕಾರ್ಯತಂತ್ರದ (UN Global Counter-Terrorism Strategy) ಒಂಬತ್ತನೇ ಪರಿಶೀಲನಾ ನಿರ್ಣಯವು 140 ರಾಷ್ಟ್ರಗಳ ಬೆಂಬಲದೊಂದಿಗೆ ಅಂಗೀಕಾರಗೊಂಡಿದ್ದು, ಭಾರತ ಪ್ರಸ್ತಾಪಿಸಿರುವ CCIT ಅನ್ನು ಶೀಘ್ರ ಅಂತಿಮಗೊಳಿಸಲು ಸದಸ್ಯ ರಾಷ್ಟ್ರಗಳು ಎಲ್ಲ ರೀತಿಯ ಪ್ರಯತ್ನಗಳನ್ನು ಕೈಗೊಳ್ಳುವಂತೆ ಕರೆ ನೀಡಿದೆ.

ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಪಿ. ಹರೀಶ್ ಮಾತನಾಡಿ, ಭಯೋತ್ಪಾದನೆ ವಿರುದ್ಧ ವಿಶ್ವಮಟ್ಟದಲ್ಲಿ ಎಲ್ಲರೂ ಒಪ್ಪುವಂತಹ ಏಕರೂಪದ ಕಾನೂನು ಚೌಕಟ್ಟು ಇಲ್ಲದಿರುವುದು ಜಾಗತಿಕ ಭಯೋತ್ಪಾದನೆ ನಿಗ್ರಹ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಹೇಳಿದರು.

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ದ್ವಂದ್ವ ನೀತಿಗೆ ಅವಕಾಶ ಇರಬಾರದು ಎಂದು ಒತ್ತಿ ಹೇಳಿದ ಅವರು, ಭಯೋತ್ಪಾದಕ ಕೃತ್ಯಗಳ ಸಂಚುಕೋರರು, ಹಣಕಾಸು ಪೂರೈಕೆದಾರರು ಹಾಗೂ ಬೆಂಬಲಿಗರನ್ನು ಕಾನೂನಿನ ಮುಂದೆ ಉತ್ತರದಾಯಕರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.

CCIT ಜಾರಿಯಾದರೆ ಭಯೋತ್ಪಾದನೆ ವಿರುದ್ಧದ ಅಂತರರಾಷ್ಟ್ರೀಯ ಸಹಕಾರ, ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಹಾಗೂ ಹಸ್ತಾಂತರ ಪ್ರಕ್ರಿಯೆ (Extradition) ಮತ್ತಷ್ಟು ಬಲಗೊಳ್ಳಲಿದ್ದು, ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ, ಹಣಕಾಸು ಮತ್ತು ಶಸ್ತ್ರಾಸ್ತ್ರಗಳ ಲಭ್ಯತೆಯನ್ನು ತಡೆಯಲು ನೆರವಾಗಲಿದೆ ಎಂದು ಅವರು ಹೇಳಿದರು.

ಇದೇ ವೇಳೆ, ಈ ಕಾರ್ಯತಂತ್ರದ ಪರಿಷ್ಕೃತ ನಿರ್ಣಯದ ವಿರುದ್ಧ ಅಮೆರಿಕ, ಇಸ್ರೇಲ್ ಮತ್ತು ಅರ್ಜೆಂಟಿನಾ ಮತ ಚಲಾಯಿಸಿವೆ

Share This Article
Leave a Comment